ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಪ್ರಕರಣದ ತನಿಖೆಗಾಗಿ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಇಬ್ಬರು ಅಧಿಕಾರಿಗಳು ಹಿಂದೆ ಸರಿದಿದ್ದಾರೆ. ತನಿಖೆಯ ಹೊಣೆಯಿಂದ ಹೀಗೆ ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲ ಎಂದು ಸೇವಾ ನಿಯಮಗಳು ಸ್ಪಷ್ಟವಾಗಿ ಹೇಳುತ್ತವೆ. ಅಧಿಕಾರಿಗಳು ತಮಗೆ ನಿರ್ವಹಿಸಿದ ಜವಾಬ್ದಾರಿಯಿಂದ ಹಿಂದೆ ಸರಿಯುತ್ತೇವೆ ಎಂದು ಸಾಮಾನ್ಯವಾಗಿ ಕೇಳುವಂತಿಲ್ಲ ಇಲ್ಲವೇ ಮನವಿ ಮಾಡುವಂತಿಲ್ಲ. ಒಂದು ವೇಳೆ ಅಧಿಕಾರಿ ಸ್ಥಳೀಯರೇ ಆಗಿದ್ದರೆ ಆ ನಿರ್ದಿಷ್ಟ ಜವಾಬ್ದಾರಿ ಮುಜುಗರ ಉಂಟು ಮಾಡುವಂತಿದ್ದರೆ ಅಥವಾ ಕಷ್ಟದಾಯಕವಾಗಿ ಇದೆ ಎಂದಾದರೆ ಕೇಳಬಹುದು. ಸರಿಯಾದ ಕಾರಣ ಇಲ್ಲದೆ ತನಿಖೆ ಜವಾಬ್ದಾರಿ ತನಗೆ ಬೇಡ ಎಂದರೆ ಒಪ್ಪಲು ಆಗದು. ಆದಾಗ್ಯೂ ಬೇಡ ಎಂದವರನ್ನು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಆದೇಶಿಸಿದರೆ ಸಾರ್ವಜನಿಕ ಹಿತಾಸಕ್ತಿ ಬಳಲುತ್ತದೆ.ಕರ್ತವ್ಯದ ವೇಳೆ ಪ್ರಭಾವಕ್ಕೆ ಒಳಗಾಗಬಾರದು ಎಂದು ಸೂಚಿಸುವ ನಿಯಮಗಳನ್ನು ಬಳಸಿಕೊಂಡೇ ಅಧಿಕಾರಿಗಳು ತನಿಖೆಯಿಂದ ಹಿಂದೆ ಸರಿಯುವ ಪರಿಪಾಟ ಇದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

