Breaking News

ಕೆಮ್ಮು ಸಿರಪ್‌ ಕೇಸ್‌: ಕೋಲ್ಡ್‌ರಿಫ್‌ ಮಾಲಕನ ಆಸ್ತಿ ಜಪ್ತಿ

ಮಧ್ಯಪ್ರದೇಶದಲ್ಲಿ ಕನಿಷ್ಠ 20 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್‌ರಿಫ್‌ ಕೆಮ್ಮಿನ ಸಿರಪ್‌ ತಯಾರಕ ಶ್ರೀಸನ್‌ ಫಾರ್ಮಾದ ಪ್ರವರ್ತಕ ಜಿ. ರಂಗನಾಥನ್‌ಗೆ ಸೇರಿದ 2.04 ಕೋಟಿ ರೂ. ಮೌಲ್ಯದ ಚೆನ್ನೈನ 2 ಫ್ಲಾಟ್‌ಗಳನ್ನು ಇ.ಡಿ. ಜಪ್ತಿ ಮಾಡಿದೆ. ಹಣಕಾಸು ಅಕ್ರಮಗಳ ತಡೆ ಕಾಯ್ದೆಯಡಿ ಕಾನೂನು ಕ್ರಮ ಜರಗಿಸಿರುವ ಇ.ಡಿ., ತಮಿಳುನಾಡಿನ ಕೊಡಂಬಾಕಂನಲ್ಲಿ ಆಸ್ತಿಗಳನ್ನು ಜಪ್ತಿ ಮಾಡಿದೆ.ಈ ಆಸ್ತಿಗಳು ರಂಗನಾಥನ್‌ ಮತ್ತವರ ಕುಟುಂಬ ಸದಸ್ಯರಿಗೆ ಸೇರಿದ್ದಾಗಿದೆ ಎಂದು ಇ.ಡಿ. ತಿಳಿಸಿದೆ. ರಂಗನಾಥನ್‌ರನ್ನು ಅಕ್ಟೋಬರ್‌ನಲ್ಲಿ ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದರು. ಕಂಪೆನಿಯು ಔಷಧ ತಯಾರಿಕೆಗೆ ಕೈಗಾರಿಕ ದರ್ಜೆಯ ಕಚ್ಚಾ ವಸ್ತುಗಳನ್ನು ಬಳಸಿ ಅಗ್ಗದ ಉತ್ಪಾದನೆ ಮಾಡಿ ಲಾಭ ಗಳಿಸುತ್ತಿತ್ತು ಎಂದು ಇ.ಡಿ. ಆರೋಪಿಸಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *