ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೀದಿ ಬದಿಯ ವ್ಯಾಪಾರಸ್ಥರು, ತಮ್ಮ ಕುಂದುಕೊರತೆಗಳನ್ನು ಹಾಗೂ ಪಾಲಿಕೆಯಿಂದ ನೀಡಬೇಕಾದ ಸೌಕರ್ಯಗಳ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದು, ಸಭೆಯಲ್ಲಿ ಅಳಲನ್ನು ತೋಡಿಕೊಂಡರು. ಅಲ್ಲದೇ ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.ಹುಬ್ಬಳ್ಳಿಯ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೀದಿ ಬದಿ ವ್ಯಾಪಾರಸ್ಥರ ಸಭೆಯಲ್ಲಿ ವ್ಯಾಪಾರಸ್ಥರು ವಿವಿಧ ಬೇಡಿಕೆಯ ಮನವಿಯನ್ನು ಪಾಲಿಕೆ ಆಯುಕ್ತರಿಗೆ ಸಲ್ಲಿಸಿದರು…

ಪಾಲಿಕೆ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ನೇತೃತ್ವದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಶ್ರೀಧರ್ ದಂಡಪ್ಪನವರ ಉಪಸ್ಥಿತರಿದ್ದು, ವ್ಯಾಪಾರಸ್ಥರ ಕುಂದುಕೊರತೆಗಳನ್ನು ಆಲಿಸಿದರು.ಕೆಲವು ವ್ಯಾಪಾರಸ್ಥರನ್ನು ವ್ಯಾಪಾರದ ಸ್ಥಳದಿಂದ ಎತ್ತಂಗಡಿ ಮಾಡಿವ ಕೆಲಸ ಮಾಡಲಾಗುತ್ತಿದೆ. ಅವರಿಗೆ ಸೂಕ್ತ ಸ್ಥಳ ನೀಡಿ ಎತ್ತಂಗಡಿ ಮಾಡಬೇಕು. ಜನತಾ ಬಜಾರ್‌ನಲ್ಲಿ 177 ವ್ಯಾಪಾರಿಗಳು ಜಾಗ ಬಿಟ್ಟುಕೊಟ್ಟಿದ್ದಾರೆ. ಆದರೆ ಜನತಾ

ಬಜಾರ್‌ನ ಹೊಸ ಕಟ್ಟಡದಲ್ಲಿ ಈವರೆಗೂ ಅನೇಕರಿಗೂ ಜಾಗ ನೀಡಿಲ್ಲ. ಮೂರು ಮಾರುಕಟ್ಟೆ ವಲಯ ಗುರುತಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಬೇಕು. ಯುವಕ- ಯುವಕಿಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಬೀದಿಬದಿ ವ್ಯಾಪಾರಸ್ಥರ ಭವನ ನಿರ್ಮಾಣ ಮಾಡಬೇಕು. ಅದರಿಂದ ಪಾಲಿಕೆ ಮತ್ತು ಬೀದಿಬದಿ ವ್ಯಾಪಾರಸ್ಥರಿಗೂ ಅನುಕೂಲ ಆಗಲಿದೆ. 20 ಸಾವಿರಕ್ಕೂ ಅಧಿಕ ಬೀದಿಬದಿ ವ್ಯಾಪಾರಸ್ಥರು ಇದ್ದಾರೆ. ಅವರನ್ನು ಗುರುತಿಸಿ ಲೈಸೆನ್ಸ್ ನೀಡಬೇಕು. ಅಧಿಕಾರಿಗಳು ಕಿರುಕುಳ ಮಾಡಬಾರದು ಎಂದು ತಿಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಇನ್ನೂ 41 ವ್ಯಾಪಾರಿ ವಲಯಗಳನ್ನು ಘೋಷಣೆ ಮಾಡಬೇಕು. ಬೀದಿಬದಿ ವ್ಯಾಪಾರಸ್ಥರಿಗೆ ತೆರಿಗೆ ದರ ನಿಗದಿ ಮಾಡಬೇಕು. ಹೊರೆಯಾಗದಂತೆ ನೊಡಿಕೊಳ್ಳಬೇಕು ವ್ಯಾಪಾರಸ್ಥರಿಗೆ ಸೌಕರ್ಯಗಳನ್ನು ಕಲ್ಪಿಸಬೇಕು. ದುರ್ಗದಬೈಲ್, ಶಾ ಬಜಾರ್, ವ್ಯಾಪಾರಸ್ಥರಿಗೆ ಅನುಕೂಲ ಮಾಡಬೇಕು ಎಂದ ಅವರು, ಬೀದಿಬದಿ ವ್ಯಾಪಾರಸ್ಥರು ಪ್ರತಿದಿನ ಹೋರಾಟ ಮಾಡಿ, ಮೀಟರ್ ಬಡ್ಡಿ ತೆಗೆದುಕೊಂಡು ವ್ಯಾಪಾರ ಮಾಡಿ ಬದುಕು ನಡೆಸುತ್ತಿದ್ದಾರೆ. ತೀರಾ ಕಡುಬಡವರಾಗಿದ್ದಾರೆ. ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ವ್ಯಾಪಾರಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

