Breaking News

ಆರೋಪಿ ಬಳಿ ಇದ್ದ ಹಣ ಕದ್ದು ಪತ್ನಿಗೆ ಒಡವೆ ಕೊಡಿಸಿ, ಉಳಿದ ಹಣ ಮಂಚದಡಿ ಅಡಗಿಸಿಟ್ಟ ಕಾನ್ಸ್ ಟೇಬಲ್!

ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಓರ್ವ ಆರೋಪಿ ಬಳಿ ಇದ್ದ ಹಣ ಕದ್ದು ಪತ್ನಿಗೆ ಒಡವೆ ಕೊಡಿಸಿ, ಉಳಿದ ಹಣವನ್ನು ಮನೆಯಲ್ಲಿ ಮಂಚದಡಿಗೆ ಬಚ್ಚಿಟ್ಟಿರುವ ಆರೋಪ ಕೇಳಿಬಂದಿದೆ.ಹಣ ಕದ್ದು ತನಗೇನೂ ಗೊತ್ತಿಲ್ಲದಂತೆ ಕಾನ್ಸ್ ಟೇಬಲ್ ಜಬಿವುಲ್ಲಾ ನಾಟಕವಾಡಿದ್ದಾನೆ. ಜೈಲು ಸೇರಿದ್ದ ಆರೋಪಿ ಸೈಬರ್ ಕಳ್ಳ ಜಾಮೀನು ಪಡೆದು ಹೊರಬಂದಿದ್ದಾನೆ. ಕಾರಿನಲ್ಲಿದ್ದ ಹಣದ ಬ್ಯಾಗ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಆರೋಪಿ ಸೈಬರ್ ಪೊಲೀಸರ ಬಳಿ ಪ್ರಶ್ನಿಸಿದ್ದಾನೆ. ಆರೋಪಿ ಪ್ರಶ್ನೆಗೆ ಗಾಬರಿಯಾದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಣದ ಬ್ಯಾಗ್ ಕಾನ್ಸ್ ಟೇಬಲ್ ಜಬಿವುಲ್ಲಾ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಸಿಸಿ ಕ್ಯಾಮರಾದಲ್ಲಿ ಹಣದ ಬ್ಯಾಗ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

Share News

About BigTv News

Check Also

ಪತ್ನಿಯನ್ನು ಕತ್ತು ಹಿಸುಕಿ ಹತ್ಯೆಗೈದು ಇಡೀ ರಾತ್ರಿ ಶವದ ಪಕ್ಕದಲ್ಲೇ ಮಲಗಿದ್ದ ಪಾಪಿ ಪತಿ.!

ದೆಹಲಿ: ಮದ್ಯ ಸೇವಿಸುವುದನ್ನು ಪತ್ನಿ ವಿರೋಧಿಸಿದ್ದಕ್ಕೆ ಕೋಪಗೊಂಡ ಪತಿಯೊಬ್ಬ 32 ವರ್ಷದ ಗೀತಾ ಭಾಟಿ ಅವರನ್ನು ಕತ್ತು ಹಿಸುಕಿ ಹತ್ಯೆಗೈದ …

Leave a Reply

Your email address will not be published. Required fields are marked *