Breaking News

ಮುಂಜಾನೆ 3ರ ಹೊತ್ತು ಮೆಜೆಸ್ಟಿಕ್‌ನಲ್ಲಿ ಬಿತ್ತು ಮಂಗಳಮುಖಿಯ ಹೆಣ! ಬೆಚ್ಚಿ ಬೀಳಿಸುತ್ತೆ ದರೋಡೆಕೋರನ ಕೃತ್ಯ!

ಬೆಂಗಳೂರು: ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣದ ಸಮೀಪ ಮಂಗಳಮುಖಿಯೊಬ್ಬರನ್ನು ಕೇವಲ ₹200 ಹಣಕ್ಕಾಗಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ದೇವಿ ಎಂಬ ಮಂಗಳಮುಖಿ ಕೊಲೆಯಾದವರು. ರಾಮಮೂರ್ತಿನಗರದ ಗೌತಮ್ (29) ಎಂಬಾತ ಕೊಲೆ ಆರೋಪಿಯಾಗಿದ್ದು, ರಾತ್ರಿ ವೇಳೆ ದರೋಡೆ ಮಾಡುತ್ತಿದ್ದ ಎನ್ನಲಾಗಿದೆ. ದೇವಿ ಬಳಿ ₹200 ಹಣ ಕೇಳಿದ್ದ ಗೌತಮ್, ಹಣ ನೀಡಲು ನಿರಾಕರಿಸಿದಾಗ ಡ್ರ್ಯಾಗರ್‌ನಿಂದ ತಲೆಗೆ ಹೊಡೆದು, ಬಳಿಕ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ನಂತರ ಬ್ಯಾಗ್ ಮತ್ತು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಉಪ್ಪಾರಪೇಟೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಗೌತಮ್‌ನನ್ನು ಬಂಧಿಸಿದ್ದಾರೆ.

Share News

About BigTv News

Check Also

ದೀಪಾವಳಿ ಹಬ್ಬದ ದಿನವೇ ಕುಟುಂಬಸ್ಥರು ಕಣ್ಣೀರು! ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್​ ಸವಾರನ ಪ್ರಾಣ ತೆಗೆದ ಮಹಿಳೆ ಪರಾರಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ವೇಗವಾಗಿ ಚಲಾಯಿಸುತ್ತಿದ್ದ ಮಹೀಂದ್ರಾ ಥಾರ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ …

Leave a Reply

Your email address will not be published. Required fields are marked *