Breaking News

ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು

ಕುಂದಾಪುರ: ಗಂಗೊಳ್ಳಿ ಬಂದರು ರಸ್ತೆ ದೊಡ್ಡಹಿತ್ಲು ಪದ್ಮಾವತಿ (67) ಅವರು ಬಸ್‌ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ಮೀನು ವ್ಯಾಪಾರ ಮಾಡಿಕೊಂಡಿರುವ ಅವರು 10 ವರ್ಷಗಳ ಹಿಂದೆ ಹೃದಯಕ್ಕೆ ಸಂಬಂಧಿಸಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಗಂಗೊಳ್ಳಿಯಿಂದ ಮೀನು ತೆಗೆದುಕೊಂಡು ಖಾಸಗಿ ಬಸ್ಸಿನಲ್ಲಿ ಕುಂದಾಪುರದಲ್ಲಿ ಮೀನು ವ್ಯಾಪಾರ ಮಾಡಲು ಬರುತ್ತಿದ್ದಾಗ ಶಾಸ್ತ್ರಿ ಪಾರ್ಕ್‌ನಿಂದ ಸ್ವಲ್ಪ ಮುಂದೆ ಬಸ್ಸಿನಲ್ಲಿ ಕುಸಿದು ಬಿದ್ದರು.ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪರೀಕ್ಷಿಸಿದ ವೈದ್ಯರು ಪದ್ಮಾವತಿಯವರು ಮೃತಪಟ್ಟಿರುವುದಾಗಿ ತಿಳಿಸಿದರು. ಪ್ರಕರಣ ದಾಖಲಾಗಿದೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *