Breaking News

ಡಿಜಿ ಆದೇಶ ಗಾಳಿಗೆ..?ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ವಿರುದ್ಧ ಜಿಎಸ್‌ಟಿ” ವಸೂಲಿ ಆರೋಪ..!

ರಸ್ತೆ ಮೇಲೆ ಗಸ್ತು ಬಿಟ್ಟು ಗಲಾಟೆ..? ವಾಹನ ಸವಾರರ ಜೊತೆ ಕಿರಿಕಿರಿ–ಹಣ ಬೇಡಿಕೆ ಆರೋಪಕ್ಕೆ ಹುಬ್ಬಳ್ಳಿ ಪೊಲೀಸ್ ಸಿಲುಕಿತು!

ಜನರ ನಂಬಿಕೆಗೆ ಧಕ್ಕೆ!ಟ್ರಾಫಿಕ್ ಪೊಲೀಸರ ವರ್ತನೆಗೆ ಆಕ್ರೋಶ–ಕಠಿಣ ಕ್ರಮಕ್ಕೆ ಒತ್ತಾಯ…

ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ವಿರುದ್ಧ ಗಂಭೀರ ಆರೋಪ: ಡಿಜಿ ಆದೇಶ ಗಾಳಿಗೆ..?

ಹುಬ್ಬಳ್ಳಿ–ಧಾರವಾಡ ನಗರದಲ್ಲಿ ಕೆಲ ಟ್ರಾಫಿಕ್ ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ. ಸಂಚಾರ ನಿಯಂತ್ರಣ ಮಾಡಬೇಕಾದ ಪೊಲೀಸರು, ವಾಹನ ಸವಾರರ ಜೊತೆ ಜಗಳ, ಕಿರಿಕಿರಿ ಮಾಡುವುದು ಮತ್ತು ಹಣದ ಬೇಡಿಕೆ ಇಡುವುದು ಎಂಬ ಆರೋಪಗಳು ಕೇಳಿಬರುತ್ತಿವೆ…

ಪೊಲೀಸ್ ಇಲಾಖೆಯ ಡಿಜಿ ಅವರು ಈಗಾಗಲೇ ಸ್ಪಷ್ಟ ಆದೇಶ ನೀಡಿದ್ದು, ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ಗಸ್ತು ತಿರುಗಿ ಸುಗಮ ಸಂಚಾರಕ್ಕೆ ಸಹಾಯ ಮಾಡಬೇಕು ಎಂದು ಸೂಚಿಸಿದ್ದರು. ಆದರೆ ಕೆಲ ಕಡೆಗಳಲ್ಲಿ ಈ ಆದೇಶ ಪಾಲನೆಯಾಗುತ್ತಿಲ್ಲ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ….

ಹುಬ್ಬಳ್ಳಿ ರಿಂಗ್ ರೋಡ್ ಬೈಪಾಸ್ ಪ್ರದೇಶ ಸೇರಿದಂತೆ ಹಲವು ಸ್ಥಳಗಳಲ್ಲಿ ಗಸ್ತು ವಾಹನಗಳನ್ನು ನಿಲ್ಲಿಸಿ, ವಾಹನ ಸವಾರರ ಜೊತೆ ಅನಗತ್ಯವಾಗಿ ವಾಗ್ವಾದ ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ ಎನ್ನಲಾಗುತ್ತಿದೆ. ಕೆಲವರು “ಜಿಎಸ್‌ಟಿ” ಎಂಬ ಹೆಸರಿನಲ್ಲಿ ಹಣ ಕೇಳುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ…

ಈ ರೀತಿಯ ವರ್ತನೆ ಪೊಲೀಸ್ ಇಲಾಖೆಯ ಗೌರವಕ್ಕೆ ಕಳಂಕ ತರುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಾನೂನು ಉಲ್ಲಂಘನೆ ಮಾಡುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥರನ್ನು ತಕ್ಷಣ ಸಸ್ಪೆಂಡ್ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ…

ಈ ಘಟನೆಗಳ ಬಗ್ಗೆ ಗೃಹ ಇಲಾಖೆ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಹೆಚ್ಚಾಗಿದೆ.ಪೊಲೀಸ್ ಇಲಾಖೆ ಜನಸ್ನೇಹಿ ಧೋರಣೆ ತಾಳಿದಾಗ ಮಾತ್ರ ಸಾರ್ವಜನಿಕರಲ್ಲಿ ವಿಶ್ವಾಸ ಉಳಿಯುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ….

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *