ಕುಂದಾಪುರ: ಕೋಟೇಶ್ವರದ ಮನೆಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ಸಂಭವಿಸಿದೆ.ಕೋಟೇಶ್ವರ ಆಟಕೆರೆ ಬಟ್ಟೆ ಅಂಗಡಿ ಎದುರು ನಿವಾಸಿ ಪೂಜಾ ಕಿಣಿ ಅವರು ಗೃಹಪ್ರವೇಶಕ್ಕೆಂದು ಹೋಗಲು ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ನೋಡುವಾಗ ಕೆಲವೊಂದು ಆಭರಣಗಳು ಇರಲಿಲ್ಲ.ವಿವಿಧ ಬಗೆಯ ಸರ, ಚಿನ್ನದ ಬಳೆಗಳು ಸೇರಿ ಒಟ್ಟು 23 ಪವನ್ ಚಿನ್ನಾಭರಣಗಳ ಮೌಲ್ಯ 18 ಲಕ್ಷ ರೂ.ಗಳಾಗಿದ್ದು ಯಾರೋ ಕಳ್ಳರು ಕಳವು ಮಾಡಿದ್ದಾಗಿ ದೂರು ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

