ಸ್ತ್ರೀರೋಗ ತಜ್ಞೆ ಡಾ. ಲಲಿತಾ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಠಾಣೆ ಪೋಲೀಸರು ನೇಪಾಳ ಮೂಲದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಮನೆ ಕೆಲಸಕ್ಕೆ ಸೇರಿಕೊಂಡಿದ್ದ ನೇಪಾಳದ ದಂಪತಿ ಮನೆಯ ನೆಲಮಹಡಿಯಲ್ಲಿ ವಾಸವಾಗಿದ್ದರು. ಡಾ. ಲಲಿತಾ ಅವರ ಪತಿ ಕೂಡ ವೈದ್ಯರಾಗಿದ್ದಾರೆ. ಪುತ್ರ ಎಂಬಿಬಿಎಸ್ ಓದುತ್ತಿದ್ದು, ವೈದ್ಯ ದಂಪತಿಯ ಮನೆಯಲ್ಲಿ ಹೆಚ್ಚಿನ ಹಣ, ಚಿನ್ನಾಭರಣ ಇರುವ ಮಾಹಿತಿ ತಿಳಿದುಕೊಂಡಿದ್ದ ಆರೋಪಿಗಳು ಕೆಲಸಕ್ಕೆ ಸೇರಿಕೊಂಡು ಕೃತ್ಯವೆಸಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

