ಮೊಬೈಲ್ ನೋಡುತ್ತಾ ಕುಳಿತಿದ್ದ ಶಹಬಾಜ್ ಬಳಿ ಬಂದ ನವೀನ್ ಏಕಾಏಕಿ ಚಾಕುವಿನಿಂದ ಎದೆಯ ಬಲ ಭಾಗಕ್ಕೆ ಇರಿದಿದ್ದಾನೆ. ರಕ್ತಸ್ರಾವಕ್ಕೊಳಗಾದ ಯುವಕನನ್ನು ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಯುವಕನ ಮೇಲೆ ನಡೆದಿರುವ ಚಾಕು ಇರಿತದ ವಿಡಿಯೊ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಸ್ಥಳಕ್ಕೆ ದೊಡ್ಡಬಳ್ಳಾಪುರ ಉಪವಿಭಾಗ ಡಿವೈಎಸ್‍ಪಿ ಪಾಡುರಂಗ, ಆರಕ್ಷಕ ನಿರೀಕ್ಷಕ ಪ್ರಶಾಂತ್ ಎಸ್ ನಾಯಕ್, ಪಿಎಸ್‍ಐ ಸಾಧಿಕ್ ಪಾಷಾ, ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿ ನವೀನ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿ ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

