ಕೂಲಿ ಕೆಲಸ ಕೊಡುವುದಾಗಿ ಹೇಳಿ ಮೂವರು ಕಾರ್ಮಿಕರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಮಾಸಿಗೌಡನದೊಡ್ಡಿಯ ರಕ್ಷಿತ್ ಕುಮಾರ್ ಅಲಿಯಾಸ್ ಚಿನ್ನಿ ಹಾಗೂ ಚನ್ನಂಕೇಗೌಡನದೊಡ್ಡಿಯ ಸುನೀಲ್ ರಾಜ್ ಅರಸ್ ಬಂಧಿತರು.ಕಾರ್ಮಿಕರಿಂದ ಸುಲಿಗೆ ಮಾಡಿದ್ದ ₹11,700 ನಗದು, 3 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆಯಲಾಯಿತು ಎಂದು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

