ಉಡುಪಿ: ಕಾರು ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರರು ಗಾಯಗೊಂಡ ಘಟನೆ ಕರಾವಳಿ ಬೈಪಾಸ್ ಸಂತೆಕಟ್ಟೆ ರಸ್ತೆಯಲ್ಲಿ ಸಂಭವಿಸಿದೆ. ಸ್ಕೂಟರ್ ಸವಾರರಾದ ಗೀತಾ (49) ಮತ್ತು ರಕ್ಷಾ (24) ಗಾಯಗೊಂಡವರು. ಚಂದಪ್ಪ ಅವರು ತಮ್ಮ ಕಾರನ್ನು ಕರಾವಳಿ ಬೈಪಾಸ್ ಕಡೆಯಿಂದ ಸಂತೆಕಟ್ಟೆಯತ್ತ ವೇಗವಾಗಿ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ಕೊಡಂಕೂರು ಅಡ್ಡರಸ್ತೆಗೆ ತಿರುಗಿಸಿದ ಪರಿಣಾಮ ಕರಾವಳಿ ಬೈಪಾಸ್ ಕಡೆಯಿಂದ ಸಂತೆಕಟ್ಟೆಯತ್ತ ಸಾಗುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆಯಿತು ಎಂದು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

