Breaking News

ಹರಿಹರ | ಮೈದುಂಬಿದ ತುಂಗಭದ್ರೆ: ವೈಯಾರ ನೋಡಲು ಬಂದ ಜನರು!

ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿನ ಬಿರುಸಿನ ಮಳೆ ಹಾಗೂ ಭದ್ರಾ ಡ್ಯಾಂನಿಂದ ನೀರು ಹರಿ ಬಿಟ್ಟಿರುವುದರಿಂದ ತಾಲ್ಲೂಕಿನಲ್ಲಿ ಹರಿಯುತ್ತಿರುವ ಜಿಲ್ಲೆಯ ಜೀವ ನದಿ ತುಂಗಭದ್ರ ನದಿ ಮೈದುಂಬಿದ್ದು, ದೃಶ್ಯ ನೋಡಲು ಜನರು ಗುಂಪು- ಗುಂಪಾಗಿ ಬರುತ್ತಿದ್ದಾರೆ.ನದಿಯ ಈ ಭಾಗದಲ್ಲಿ ಬರುವ ನೂರಾರು ಜನರಲ್ಲಿ ಹಲವರು ಸೆಲ್ಫಿಗಾಗಿ ನದಿಯ ಸಮೀಪಕ್ಕೆ ಹೋಗುತ್ತಿದ್ದಾರೆ, ಸೇತುವೆಯ ಮೇಲಿನಿಂದ ಯೋಗ ಮಂಟಪದ ಮೆಟ್ಟಿಲುಗಳನ್ನು ಇಳಿಯುತ್ತಾರೆ. ನದಿ ಸಮೀಪಕ್ಕೆ ಜನರು ಹೋಗದಂತೆ ನೋಡಿಕೊಳ್ಳಲು ಓರ್ವ ಗೃಹರಕ್ಷಕ ಸಿಬ್ಬಂದಿ ಮಾತ್ರ ಇದ್ದಾರೆ. ಅವರು ವಿಷಲ್ ಊದಿ ನದಿಯಿಂದ ದೂರ ಇರಲು ಎಷ್ಟೇ ಎಚ್ಚರಿಕೆ ಕೊಟ್ಟರು ಜನರು ಗಮನವನ್ನೇ ಕೊಡುತ್ತಿಲ್ಲ.’ಇಲ್ಲಿ ಧ್ವನಿವರ್ಧಕವನ್ನು ಅಳವಡಿಸಬೇಕು, ಹೆಚ್ಚಿನ ಸಿಬ್ಬಂದಿಯನ್ನೂ ನಿಯೋಜಿಸುವ ಅಗತ್ಯ’ ಎಂದು ಹಲವರ ಅಭಿಪ್ರಾಯವಾಗಿದೆ.ಪ್ರವಾಹ ಭೀತಿ: ನದಿಯಲ್ಲಿ ಇನ್ನಷ್ಟು ನೀರಿನಹರಿವು ಹೆಚ್ಚಾದಲ್ಲಿ ನಗರದ ಗಂಗಾನಗರದ ಹಲವು ಮನೆಗಳು ಜಲಾವೃತವಾಗುವ ಭೀತಿ ಇದೆ. ಪ್ರತಿ ವರ್ಷದ ಮಳೆಗಾಲದಲ್ಲಿ ತಾಲ್ಲೂಕು ಆಡಳಿತ ಈ ಭಾಗದ 20ಕ್ಕೂ ಹೆಚ್ಚು ಮನೆಗಳ ಕುಟುಂಬದವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುತ್ತದೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *