ಬಾಗಲಕೋಟೆ: ಜಿಲ್ಲೆಯ ಸುನಗ ಕ್ರಾಸ್ ಬಳಿ ಬಸ್, ಲಾರಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಲಾರಿ ಡಿಕ್ಕಿಯಾದ ರಭಸಕ್ಕೆ ಬಸ್‌ನ ಹಿಂಭಾಗದ ಅರ್ಧ ಭಾಗ ಕಿತ್ತುಹೋಗಿದೆ. ಬಸ್‌ನಲ್ಲಿದ್ದ ವಾಣಿ ದೇಸಾಯಿ (26), ಶಿವಕುಮಾರ್ ಕಡ್ಲಿವಾಡ (25) ಮೃತಪಟ್ಟಿದ್ದಾರೆ. ವಾಣಿ ದೇಸಾಯಿ ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ ಗ್ರಾಮದ ನಿವಾಸಿ. ಶಿವಕುಮಾರ ಕಡ್ಲಿವಾಡ ಗದಗ ಜಿಲ್ಲೆಯ ನರಗುಂದ ಮೂಲದವರು. ಬಸ್ ವಿಜಯಪುರ ಕಡೆ ಹೊರಟಿದ್ದರೆ, ಲಾರಿ ವಿಜಯಪುರ ಕಡೆಯಿಂದ ಬಾಗಲಕೋಟೆ ಕಡೆ ಬರುತ್ತಿತ್ತು. ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

