Breaking News

ರಾಜ್ಯದಲ್ಲಿ ಆಪರೇಷನ್‌ ಕ್ಲೀನ್‌ ಜೈಲ್‌: 36 ಗಂಟೆ ಪರಿಶೀಲನೆ, 24 ಮೊಬೈಲ್‌ಗಳು ಪತ್ತೆ!

ಜೈಲುಗಳಲ್ಲಿ ಡಿಜಿಪಿ ಅಲೋಕ್‌ ಕುಮಾರ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ. ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್‌ ಕುಮಾರ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ರಾಜ್ಯದ ಎಲ್ಲ ಜೈಲುಗಳಲ್ಲಿ ಕಟ್ಟುನಿಟ್ಟಿನ ವಿಶೇಷ ಕಾರ್ಯಾಚರಣೆ ಆರಂಭವಾಗಿದೆ. ಕಳೆದ 36 ಗಂಟೆಗಳ ಅವಧಿಯಲ್ಲಿ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ಮಂಗಳೂರು, ಮೈಸೂರು, ವಿಜಯಪುರ ಹಾಗೂ ಬೆಳಗಾವಿ ಜಿಲ್ಲಾ ಕಾರಾಗೃಹಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಕೈದಿಗಳಿಂದ ಮೊಬೈಲ್‌ ಫೋನ್‌, ಸಿಮ್ ಕಾರ್ಡ್‌, ಮಾದಕ ವಸ್ತುಗಳು ಸೇರಿದಂತೆ ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
• ಪರಪ್ಪನ ಅಗ್ರಹಾರ: 6 ಮೊಬೈಲ್‌, 5 ಸಿಮ್ ಕಾರ್ಡ್‌, 2 ಚಾರ್ಜರ್‌, 4 ಇಯರ್ ಫೋನ್‌, 4 ಚಾಕು
– ಮೈಸೂರು: 9 ಮೊಬೈಲ್‌, 11 ಸಿಮ್ ಕಾರ್ಡ್‌
– ಬೆಳಗಾವಿ: 4 ಮೊಬೈಲ್‌ ಹಾಗೂ 366 ಗ್ರಾಂ ಗಾಂಜಾ
– ವಿಜಯಪುರ: 1 ಮೊಬೈಲ್‌
– ಮಂಗಳೂರು: 4 ಮೊಬೈಲ್‌ಗಳು
ಈ ಹಿಂದೆ ನಡೆದ ದಿಢೀರ್ ದಾಳಿಯಲ್ಲೂ ಪರಪ್ಪನ ಅಗ್ರಹಾರದಲ್ಲಿ 19 ಮೊಬೈಲ್‌, 16 ಸಿಮ್ ಕಾರ್ಡ್‌, ಚಾರ್ಜರ್‌, ಇಯರ್ ಬಡ್ಸ್‌ ಹಾಗೂ 15,800 ರೂ. ನಗದು ಪತ್ತೆಯಾಗಿತ್ತು. ಇತ್ತೀಚೆಗೆ ಡಿಜಿಪಿ ಅಲೋಕ್‌ ಕುಮಾರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಕೈದಿಗಳಿಗೆ ನೀಡುವ ಊಟ-ತಿಂಡಿ, ಆಸ್ಪತ್ರೆ, ಬೇಕರಿ ಸೇರಿದಂತೆ ವಿವಿಧ ವಿಭಾಗಗಳನ್ನು ಪರಿಶೀಲಿಸಿದ್ದರು. ಕೈದಿಗಳಿಂದಲೂ ಮಾಹಿತಿ ಪಡೆದು, ಅದರ ಬೆನ್ನಲ್ಲೇ ಈ ಕಾರ್ಯಾಚರಣೆಗೆ ಸೂಚನೆ ನೀಡಿದ್ದರು. ಮೊಬೈಲ್‌ ವಾಪಸ್‌ಗೆ ಕಟ್ಟುನಿಟ್ಟಿನ ಸೂಚನೆ:
ಬ್ಯಾರಕ್‌ಗಳಲ್ಲಿ ಅಕ್ರಮವಾಗಿ ಮೊಬೈಲ್‌ ಬಳಕೆ ಮಾಡುತ್ತಿರುವ ಕೈದಿಗಳು ಕೂಡಲೇ ಅದನ್ನು ಸಿಬ್ಬಂದಿಗೆ ಒಪ್ಪಿಸಬೇಕು. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.ಜೈಲುಗಳಲ್ಲಿ ಎಐ ಅಳವಡಿಕೆಗೆ ಚಿಂತನೆ:
ಜೈಲುಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆ ತಡೆಗಟ್ಟಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಜೈಲಿನ ಹೊರಗಿನಿಂದ ವಸ್ತು ಎಸೆಯುವುದು, ಕೈದಿಗಳ ಅನಧಿಕೃತ ಸಂಚಾರ, ಸಿಬ್ಬಂದಿ-ಕೈದಿಗಳ ಅಕ್ರಮ ಸಂಪರ್ಕ ಪತ್ತೆ ಮಾಡಲು ಎಐ ಉಪಯೋಗಿಸುವ ಯೋಜನೆ ಇದೆ. ಪ್ರಾಯೋಗಿಕವಾಗಿ ಜಾರಿಗೊಳಿಸಿ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿಜಿಪಿ ಅಲೋಕ್‌ ಕುಮಾರ್ ತಿಳಿಸಿದ್ದಾರೆ.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *