Breaking News

ಸುಳ್ಳು ಪ್ರಕರಣ ನೆಪದಲ್ಲಿ ₹1.50 ಲಕ್ಷ ವಸೂಲಿ: ಕಗ್ಗಲೀಪುರ PSI ಹರೀಶ್ ಅಮಾನತು

ಸಣ್ಣ ಜೆರಾಕ್ಸ ಅಂಗಡಿ ಮಾಲೀಕನಿಂದ ₹1.50 ಲಕ್ಷ ವಸೂಲಿ; ಕಗ್ಗಲೀಪುರ PSI ಹರೀಶ್ ಸಸ್ಪೆಂಡ್…

ರಾಮನಗರು: ಜೆರಾಕ್ಸ್ ಅಂಗಡಿ ಮಾಲೀಕನಿಗೆ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿ ₹1.50 ಲಕ್ಷ ಹಣ ವಸೂಲಿ ಮಾಡಿದ ಆರೋಪದ ಮೇಲೆ ಕಗ್ಗಲೀಪುರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಹರೀಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅಮಾನತು ಮಾಡಿದ್ದಾರೆ. ಕನಕಪುರದ ಜ್ಯೂಸ್ ಅಂಗಡಿ ಮಾಲೀಕ ರಾಜೇಶ್ ಅವರಿಗೆ ಕರೆ ಮಾಡಿ ಎಫ್‌ಐಆರ್ ಇದೆ ಎಂದು ಬೆದರಿಸಿ, ಚನ್ನಪಟ್ಟಣಕ್ಕೆ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟು ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಗೃಹ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಡಿವೈಎಸ್ಪಿ ತನಿಖಾ ವರದಿ ಆಧರಿಸಿ ಆರೋಪ ಗಂಭೀರವೆಂದು ಪರಿಗಣಿಸಿದ ಎಸ್‌ಪಿ ಶ್ರೀನಿವಾಸ ಗೌಡ ಅವರು, ಪಿಎಸ್‌ಐ ಹರೀಶ್ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *