Breaking News

ಗದಗ: ಶಾಲಾ ವಾಹನದಿಂದ ಬಿದ್ದು ವಿದ್ಯಾರ್ಥಿ ಸಾವು

ಚಾಲಕ ಮತ್ತು ಸಹಾಯಕನ ನಿರ್ಲಕ್ಷ್ಯದಿಂದ ತಾಲ್ಲೂಕಿನ ಉಳ್ಳಟ್ಟಿ ಗ್ರಾಮದ ಖಾಸಗಿ ಶಾಲೆಯ ಎಲ್‍ಕೆಜಿ ವಿದ್ಯಾರ್ಥಿ ಪ್ರಥಮ್ ಅರುಣ ಲಮಾಣಿ (4) ಶಾಲಾ ವಾಹನದಿಂದ ಕೆಳಗಡೆ ಬಿದ್ದು ಮೃತಪಟ್ಟಿದ್ದಾನೆ.ದೊಡ್ಡೂರು ಗ್ರಾಮದ ಪ್ರಥಮ್, ಶಾಲೆಯಿಂದ ಮನೆಗೆ ಹಿಂದಿರುಗುವ ವೇಳೆ ಚಾಲಕ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ್ದಾನೆ.ಜತೆಗೆ ವಾಹನದ ಸಹಾಯಕ ಬಾಗಿಲು ಹಾಕಿರಲಿಲ್ಲ. ಅಡ್ಡಾದಿಡ್ಡಿ ಚಾಲನೆಯಿಂದ ವಾಹನದಿಂದ ಕೆಳಕ್ಕೆ ಬಿದ್ದ ಪ್ರಥಮ್ ಮೇಲೆ ವಾಹನದ ಹಿಂದಿನ ಚಕ್ರ ಹರಿದಿದೆ. ಸ್ಥಳದಲ್ಲೇ ಮೃತಪಟ್ಟ ಆತನನ್ನು ಬಸ್‌ ಒಳಗೆ ಹಾಕಿ, ಚಾಲಕ ಮತ್ತು ಸಹಾಯಕ ಪರಾರಿ ಆಗಿದ್ದಾರೆ’ ಎಂದು ಅವರು ಲಕ್ಷ್ಮೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *