ಉಡುಪಿ: ಎಚ್ಡಿಎಫ್ಸಿ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ವಿಭಾಗದ ಚಾನೆಲ್ ಪಾರ್ಟ್ನರ್ ಎಂದು ಹಿರಿಯ ನಾಗರಿಕ ಸಂತೋಷ್ ಸಿ. ಕಾಮತ್ (60) ಅವರನ್ನು ನಂಬಿಸಿ ಆನ್ಲೈನ್ನಲ್ಲಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕರೆ ಮಾಡಿದ ವ್ಯಕ್ತಿ ಬ್ಯಾಂಕಿನ ರೆಗಾಲಿಯಾ ಗೋಲ್ಡ್ ಕ್ರೆಡಿಟ್ ಕಾರ್ಡ್ ಪಡೆಯಲು ನೀವು ವಾಟ್ಸ್ಆಯಪ್ ಕರೆಯಲ್ಲಿ ಪಾನ್ ಕಾರ್ಡ್ ತೋರಿಸಬೇಕೆಂದು ಹೇಳಿ ಪುಸಲಾಯಿಸಿದ್ದ. ಕಾಮತ್ ಅವರು ಹಾಗೇ ಮಾಡಿದ್ದರು. 4 ದಿನಗಳಲ್ಲಿ ನೋಂದಾಯಿತ ವಿಳಾಸಕ್ಕೆ ಕಾರ್ಡ್ ಬರುವುದಾಗಿ ತಿಳಿಸಿ ಕರೆಯನ್ನು ಕಡಿತಗೊಳಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ 2,47,283 ರೂ. ವಂಚಕರ ಖಾತೆಗೆ ವರ್ಗವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

