Breaking News

ಚಲಿಸುತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ರೈಲ್ವೆ ಪೊಲೀಸ್

ಉಡುಪಿಯ ಕೊಂಕಣ ರೈಲು ನಿಲ್ದಾಣದಲ್ಲಿ ಚಲಿಸುತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ಮುಗ್ಗರಿಸಿ ಬಿದ್ದ ಪ್ರಯಾಣಿ ಕರೊಬ್ಬರನ್ನು ತಕ್ಷಣವೇ ಸ್ಪಂಧಿಸಿದ ರೈಲ್ವೆ ಪೊಲೀಸ್ ಪಡೆಯ ಸಿಬ್ಬಂದಿಯೊಬ್ಬರು ರಕ್ಷಿಸಿದ ಘಟನೆ ಗುರುವಾರ ರಾತ್ರಿ 10:20ರ ಸುಮಾರಿಗೆ ನಡೆದಿದೆ.ತಿರುವನಂತಪುರದಿಂದ ಹೊಸದಿಲ್ಲಿಗೆ ತೆರಳುತಿದ್ದ ಅಮೃತಸರ ಎಕ್ಸ್‌ಪ್ರೆಸ್ ರೈಲು ಉಡುಪಿ ನಿಲ್ದಾಣ ಪ್ರವೇಶಿಸುತಿ ದ್ದಂತೆ ಅದರಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರೊಬ್ಬರು ಚಲಿಸುತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ಮುಗ್ಗರಿಸಿ ಬಿದ್ದಿದ್ದರು. ಅಲ್ಲೇ ಸಮೀಪದಲ್ಲಿ ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ ಎಎಸ್‌ಐ ಸಾಜು ಯು. ತಕ್ಷಣ ಧಾವಿಸಿ ಬಂದು ಆತನನ್ನು ಹಳಿಗೆ ಬೀಳದಂತೆ ತಡೆದು ರಕ್ಷಿಸಿದ್ದರು. ಇಡೀ ಘಟನೆ ನಿಲ್ದಾಣದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *