ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೋಲಾರ ಜಿಲ್ಲೆಯ ವೇಮಗಲ್ ತಾಲೂಕಿನ ಕುರುಗಲ್ ಗೇಟ್ ಬಳಿ ನಡೆದಿದೆ.ಓಡಿಶಾ ಮೂಲದ ಯುವಕ ಸಂದೀಪ್ ಸಿಂಗ್ ಕೊಲೆಯಾದ ಯುವಕ. ಬೆಂಗಳೂರು ಮೂಲದ ಮನೋಜ್ ಹಾಗೂ ಬಳ್ಳಾರಿ ಮೂಲದ ರಾಜಾರೆಡ್ಡಿ ಎಂಬುವವರು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.ಒಟ್ಟಿಗೆ ಕುಳಿತು ಮದ್ಯ ಸೇವಿಸುತ್ತಿದ್ದಾಗ ಸ್ನೇಹಿತರ ನಡುವೆ ಗಲಾಟೆಯಾಗಿದೆ. ಕ್ಷುಲ್ಲಕ ಕಾರಣಕ್ಕೆ ಸಂದೀಪ್ ಜೊತೆ ಮನೋಜ್ ಹಾಗೂ ರಾಜಾರೆಡ್ಡಿ ಗಲಾಟೆ ಆರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿದು ಸಂದೀಪ್ ನನ್ನು ಕೊಲೆಗೈದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

