ಮಾರಕಾಸ್ತ್ರ ಹಿಡಿದು ದಾಂದಲೆ ನಡೆಸಿದ್ದ ಆರು ಮಂದಿಯನ್ನು ಸಿ.ಕೆ. ಅಚ್ಚುಕಟ್ಟು ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಪ್ರಜ್ಞಾ ಲೇಔಟ್‌ನ ವೆಂಕಟೇಶ್ ಅಲಿಯಾಸ್ ಕಾಡು, ಕತ್ರಿಗುಪ್ಪೆಯ ನಿವಾಸಿ ಗಿರೀಶ್ ಅಲಿಯಾಸ್ ಚೋಟ, ಬ್ಯಾಟರಾಯನಪುರದ ಸುರೇಂದ್ರ ಅಲಿಯಾಸ್ ಸುರಿ, ಚಂದನ್ ಅಲಿಯಾಸ್ ಸಣ್ಣ, ಶ್ರೀನಿವಾಸನಗರದ ಕೆ.ಎಸ್.ಗಣೇಶ್, ಜ್ಞಾನಭಾರತಿಯ ಗಣೇಶ ಬಂಧಿತರು.ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಗಲಾಟೆ ನಡೆದಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು. ರಸ್ತೆಯಲ್ಲಿ ಸಾಗುತ್ತಿದ್ದ ಇಬ್ಬರ ಮೇಲೆ ಆರು ಮಂದಿ ಆರೋಪಿಗಳು ಮಾರಕಾಸ್ತ್ರ ಬೀಸಿದ್ದರು. ಅಲ್ಲದೇ ರಸ್ತೆಯ ಪಕ್ಕದಲ್ಲಿದ್ದ ಬೇಕರಿಯ ಗಾಜು ಒಡೆದು ಹಾಕಿ ದಾಂದಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

