Breaking News

ಮುಳಬಾಗಿಲು: ಮನೆಗೆ ನುಗ್ಗಿ ಆಭರಣ, ನಗದು ಕಳವು

ಮನೆಗೆ ಬೀಗ ಹಾಕಿ ಉರುಸ್ ನೋಡಲು ಹೋಗಿದ್ದ ವೇಳೆ ಮನೆ ಕಬ್ಬಿಣದ ಕಿಟಕಿ ಸರಳು ಕತ್ತರಿಸಿ ಆಭರಣ ಮತ್ತು ನಗದು ಕಳವು ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.ಮಾರುತಿ ನಗರದ ಧನಂಜಯ ತಮ್ಮ ಕುಟುಂಬದೊಂದಿಗೆ ಹೈದರ್‌ವಲ್ಲಿ ದರ್ಗಾ ಬಳಿ ಉರುಸ್ ನೋಡಲು ಹೋಗಿದ್ದರು.ಈ ಸಂದರ್ಭದಲ್ಲಿ ಅಪರಿಚಿತರು ಒಳನುಗ್ಗಿ 5 ಗ್ರಾಂ ಬಂಗಾರ, 250 ಗ್ರಾಂ ಬೆಳ್ಳಿ ಆಭರಣ ಮತ್ತು ₹90 ಸಾವಿರ ನಗದು ಕಳವು ಮಾಡಿದ್ದಾರೆ. ಮುಳಬಾಗಿಲು ನಗರ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *