Breaking News

ಬೈಕ್‌ಗೆ ಕಾರು ಢಿಕ್ಕಿ

ಮಣಿಪಾಲ: ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಾಲಕ ಕಾರನ್ನು ಚಲಾಯಿಸಿಕೊಂಡು ಬಂದು ಬೈಕ್‌ಗೆ ಢಿಕ್ಕಿ ಹೊಡೆದ ಘಟನೆ ಅಲೆವೂರು ಸಮೀಪ ನಡೆದಿದೆ.ಜ.11ರ ಬೆಳಗ್ಗೆ 8.45ರ ಸುಮಾರಿಗೆ ಸಚಿನ್ ಪೂಜಾರಿ ಎಂಬುವರು ಪಡುಅಲೆವೂರು ಬಳಿ ಬೈಕ್‌ನಲ್ಲಿ ಹೋಗುತ್ತಿರುವಾಗ ಅಲೆವೂರು ಕಡೆಯಿಂದ ಮೂಡುಬೆಳ್ಳೆ ಕಡೆಗೆ ಕಾರಿನ ಚಾಲಕನೊಬ್ಬ ತನ್ನ ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಚೀನ್‌ ಪೂಜಾರಿ ಅವರ ಕಾರಿಗೆ ಢಿಕ್ಕಿ ಹೊಡೆದಿದ್ದಾನೆ.ಪರಿಣಾಮ ಬೈಕ್‌ ಸವಾರ ಸಚೀನ ಪೂಜಾರಿ ರಸ್ತೆಗೆ ಬಿದ್ದು ಅವರ ಬಲ ಕಾಲಿನ ಮಣಿಗಂಟಿನ ಬಳಿ ಗಾಯವಾಗಿರುತ್ತದೆ. ಕಾರಿನ ಚಾಲಕ ಯಾವುದೇ ರೀತಿಯಲ್ಲೂ ಉಪಚರಿಸದೇ ಪರಾರಿಯಾಗಿರುವ ಬಗ್ಗೆ ಮಣಿಪುರ ಗ್ರಾಮದ ನಜೀರ್‌ ಎಂಬುವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *