Breaking News

ಮೈಸೂರಿನಲ್ಲಿ ಕಳ್ಳರ ಕೈಚಳಕ : ಹುಂಡಿ ಹಣ ಹಾಗೂ ದೇವರ ಆಭರಣ ದೋಚಿದ ಕಳ್ಳರು

ದೇವಸ್ಥಾನದ ಹುಂಡಿ ಒಡೆದು ಲಕ್ಷಾಂತರ ಹಣ ದೋಚಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ತೊರವಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮಹಾಬಲೇಶ್ವರ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ಕಳ್ಳತನ ಆಗಿದೆತಡರಾತ್ರಿ ದೇವಾಲಯದ ಆವರಣಕ್ಕೆ ಆಗಮಿಸಿದ ಖದೀಮರು, ದೇವಾಲಯದ ಹುಂಡಿ ಒಡೆದು ಸುಮಾರು. 50 ಸಾವಿರಕ್ಕೂ ಹೆಚ್ಚಿನ ಮೊತ್ತ ಹಣ ದೋಚಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಬೆಳ್ಳಿ ವಿಗ್ರಹಗಳು, ಕಂಚಿನ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.ಬೆಳಗ್ಗೆ ಪೂಜೆ ಮಾಡಲು ದೇವಸ್ಥಾನಕ್ಕೆ ಬಂದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಇತ್ತೀಚಿಗೆ ಮೈಸೂರು ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಕಳ್ಳರು, ದರೋಡೆಕೋರರ ಕಾಟಕ್ಕೆ ಮೈಸೂರಿನ ಜನ ಬೆಚ್ಚಿ ಬಿದ್ದಿದ್ದರೆ. ಇದೀಗ ಈ ಪ್ರಕಣಕ್ಕೆ ಸಂಬಂಧಿಸಿದಂತೆ ಸರಗೂರು ಪೊಲೀಸ್ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದೇವಾಲಯದಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಆದರೂ, ಕಳ್ಳತನದಂತಹ ಪ್ರಕರಣ ತಡೆಗಟ್ಟಲು ಪೊಲೀಸ್‌ ಇಲಾಖೆ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಟೌನ್‌ ಪೊಲೀಸ್‌ ಠಾಣೆಯ ಸಿಬ್ಬಂದಿ ಭೇಟಿ ನೀಡಿದ್ದಾರೆ. ದೇವಾಲಯದ ಆವರಣದಲ್ಲಿನ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾ

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *