Breaking News

ಪರವಾನಗಿ ಇಲ್ಲದೆ ಪಟಾಕಿ ಸಂಗ್ರಹಿಸಿದರೆ ಅಂತಹವರ ವಿರುದ್ದ ಶಿಸ್ತು ಕ್ರಮವನ್ನು ಜರುಗಿಸುವಂತೆ ಸೂಚನೆ…

ಚಿಕ್ಕಮಗಳೂರು: ರಾಜ್ಯ ಸರ್ಕಾರ ಕಳೆದ ಕೆಲ ದಿನಗಳ ಹಿಂದೆ ನಡೆದ ಪಟಾಕಿ ಅವಗಡ ದುರಂತವನ್ನು ಮನಗಂಡು ಯಾವುದೇ ಪಟಾಕಿ ಮಾರಾಟಗಾರರು ಪರವಾನಗಿ ಇಲ್ಲದೆ ಪಟಾಕಿ ಸಂಗ್ರಹಿಸಿದರೆ ಅಂತಹವರ ವಿರುದ್ದ ಶಿಸ್ತು ಕ್ರಮವನ್ನು ಜರುಗಿಸುವಂತೆ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಕಡೂರು, ಬೀರೂರು ಪುರಸಭಾ ಅಧಿಕಾರಿಗಳು ಬೀರೂರು ಪಟ್ಟಣದ ವಿವಿಧ ಅಂಗಡಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿದರು.

ದಾಳಿ ಬಳಿಕ ಮಾತನಾಡಿದ ಬೀರೂರು ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ, ಸರ್ಕಾರದ ಆದೇಶ ಪಾಲನೆ ಮಾಡುವ ನಿಟ್ಟಿನಲ್ಲಿ ಪಟಾಕಿ ವ್ಯಾಪಾರಸ್ಥರ ಮನೆಗಳಿಗೆ ದಾಳಿ ನಡೆಸಲಾಗಿದೆ. ಬೀರೂರು ಪಟ್ಟಣದಲ್ಲಿ ಒಟ್ಟು 5 ಜನ ಪಟಾಕಿ ವ್ಯಾಪಾರ ನಡೆಸುತ್ತಿದ್ದಾರೆ. ಯಾರ ಮನೆಯಲ್ಲೂ ಪಟಾಕಿ ದಾಸ್ತಾನು ಮಾಡಲಾಗಿಲ್ಲ. ಅವರಿಗೆ ಪಟಾಕಿ ಅವಗಡದ ಬಗ್ಗೆ ತಿಳಿಸಿದರು.

ಇನ್ನು ಪಟಾಕಿ ಗೋಡನ್‌ಗಳನ್ನು ಆದಷ್ಟು ಜನವಸತಿ ಪ್ರದೇಶದಿಂದ ದೂರದಲ್ಲಿ ಇರಿಸುವಂತೆ ತಿಳಿಸಲಾಗಿದೆ. ಪುರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅಕ್ರಮವಾಗಿ ದಾಸ್ತಾನು ಸಂಗ್ರಹಿಸಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *