ಇಂದು ಮುಂಜಾನೆ ಶಾಸಕಾದ ಶ್ರೀ ಎನ್.ಹೆಚ್. ಕೋನರಡ್ಡಿ ಅವರು ನವಲಗುಂದ ನಗರದ ನೀಲಮ್ಮನ ಕೇರೆ ಹಾಗೂ ಚೆನ್ನಮ್ಮನ ಕೇರೆಗೆ ಬೇಟಿ ನೀಡಿ ನಗರದ ಜನತೆಗೆ ನೀರಿನ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳಿಗೆ ಎಚ್ಚರಿಸಿದರು. ನಂತರ ಈಜುಕೊಳ ನಿರ್ಮಾಣದ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ನವಲಗುಂದ ಪಟ್ಟಣದಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಅದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೆ ಕೆರೆಯಲ್ಲಿನ ಕುಡಿಯುವ ನೀರು ಕೆಡದಂತೆ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು
bigtvnews | Hubli Dharwad News | Kannada News | Karnataka News Hubli News | News In Hubli | Local news





