Breaking News

ದೊಡ್ಡಬಳ್ಳಾಪುರ: ಕೊಲೆ ಆರೋಪದ ಮೇಲೆ ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹತ್ಯೆ

ದೊಡ್ಡಬಳ್ಳಾಪುರ: ಮಹಿಳೆ ಹತ್ಯೆ ಆರೋಪಿಯೊಬ್ಬರು ತನ್ನ ಸ್ವಗ್ರಾಮ ತಾಲ್ಲೂಕಿನ ಕೋಳೂರಿಗೆ ಬಂದು ಮಂಗಳವಾರ ರಾತ್ರಿ ನೇಣಿ ಹಾಕಿಕೊಂಡಿದ್ದಾರೆ.ಕೋಳೂರಿನ ವೀರಭದ್ರಪ್ಪ(60) ನೇಣಿಗೆ ಶರಣದವರು. ಮೃತ ವೀರಭದ್ರಪ್ಪ ಚಿಕ್ಕಬಾಣವಾರದಲ್ಲಿ ವಾಸವಿದ್ದರು. ಸೋಮವಾರ ಹಣಕಾಸಿನ ವ್ಯವಹಾರದ ಹಿನ್ನೆಲೆ ದಾಕ್ಷಾಯಿಣಿ ಎನ್ನುವ ಮಹಿಳೆಯನ್ನು ಕೊಂದು ಪರಾರಿಯಾಗಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.ಈ ಕುರಿತಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಲೆ ಮರೆಸಿಕೊಂಡಿದ್ದ ವೀರಭದ್ರಪ್ಪ ಮಂಗಳವಾರ ರಾತ್ರಿ ಸ್ವಗ್ರಾಮ ಕೋಳೂರಿಗೆ ಬಂದು ಗ್ರಾಮದ ರಸ್ತೆ ಬದಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *