ಬೆಂಗಳೂರು:- ಹಾಸನ ಮಾರ್ಗದ ರೈಲಿನಲ್ಲಿ ನೀರಿನ ಬಾಟಲ್ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಅಮಾನವೀಯ ಹಲ್ಲೆ ನಡೆದ ಘಟನೆ ವರದಿಯಾಗಿದೆ. ಗೊಮ್ಮಟೇಶ್ವರ ರೈಲು ನಿಲ್ದಾಣದ ಬಳಿ ನಡೆದ ಈ ಘಟನೆಯಲ್ಲಿ, ಬಾಟಲ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾನೆ ಎಂಬ ಆರೋಪದ ಮೇಲೆ ರೈಲಿನ ಗುತ್ತಿಗೆ ಫುಡ್ ಡೆಲಿವರಿ ಸಿಬ್ಬಂದಿ ಯುವಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಈ ವೇಳೆ ಯುವಕನ ಬಳಿ ಇದ್ದ ಎಲ್ಲಾ ನೀರಿನ ಬಾಟಲಿಗಳನ್ನು ಹೊರಗೆ ಎಸೆಯುವಂತೆ ಧಮ್ಕಿ ಹಾಕಲಾಗಿದೆ. ಸ್ಥಳೀಯ ಪೊಲೀಸರು ಅಥವಾ ಆರ್‌ಪಿಎಫ್ ಸಿಬ್ಬಂದಿಯ ಗಮನಕ್ಕೆ ತರದೇ ಗುತ್ತಿಗೆ ಸಿಬ್ಬಂದಿಯೇ ಹಲ್ಲೆ ನಡೆಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

