ಬೆಂಗಳೂರು:- ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿದ ಚಾಲಕನೊಬ್ಬ ಪಾನಿಪುರಿ ಅಂಗಡಿಗೆ ಕಾರು ನುಗ್ಗಿಸಿದ ಘಟನೆ ಬೆಂಗಳೂರು ನಗರದ ಕಾಮಾಕ್ಷಿಪಾಳ್ಯ ಸಂಚಾರ ವಿಭಾಗ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್‌ನಲ್ಲಿ ನಡೆದಿದೆ. KA 03 NE 1782 ನೋಂದಣಿ ಸಂಖ್ಯೆಯ ಕಾರು ಕಳೆದ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಪಾವರಿ ಚಾಟ್ಸ್ ಅಂಗಡಿಗೆ ನುಗ್ಗಿದ್ದು, ಅಂಗಡಿಗೆ ಹಾನಿ ಸಂಭವಿಸಿದೆ.ಕಾರು ಗುದ್ದಿದ ಬಳಿಕ ಚಾಟ್ಸ್ ಅಂಗಡಿ ಮಾಲೀಕರಿಗೆ ಅವಾಚ್ಯ ಶಬ್ದ ಬಳಸಿ ಅವಮಾನಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಘಟನೆ ಕುರಿತು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

