Breaking News

ಅಂತರಾಜ್ಯ ಬೈಕ್ ಕಳ್ಳರ ಅರೆಸ್ಟ್ – ಲಕ್ಷ ಲಕ್ಷ ರೂ. ಮೌಲ್ಯದ ಮಾಲು ಜಪ್ತಿ!

ವಿಜಯಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 1.17 ಕೋಟಿ ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿಕೊಂಡಿದ್ದಾರೆ. ಒಟ್ಟು 48 ಪ್ರಕರಣದ 14 ಆರೋಪಿಗಳು ಬಂಧಿಸಲಾಗಿದೆ. ಅಲ್ಲದೆ, 14 ಅಂತರ್ ರಾಜ್ಯ, ಅಂತರ್ ಜಿಲ್ಲಾ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 65 ಲಕ್ಷ ರೂ. ಮೌಲ್ಯದ 426.2 ಗ್ರಾಂ ಚಿನ್ನ, 20 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ 2 ಕಾರು, 39 ಬೈಕ್ ವಶಕ್ಕೆ ಪಡೆದು, 48 ಪ್ರಕರಣದಲ್ಲಿ 1.17 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ. ಕಳೆದ ಅನೇಕ ತಿಂಗಳಿಂದ ಪೊಲೀಸರು ಕಾರ್ಯಪ್ರವೃತ್ತರಾಗಿ ಖದೀಮರ ಬಂಧನಕ್ಕೆ ಪೊಲೀಸರು ಖೆಡ್ಡಾ ತೋಡಿದ್ದರು. ವಿವಿಧ ಭಾಗಗಳಲ್ಲಿ ಅಡಗಿದ್ದ ಖದೀಮರನ್ನು ಸೆರೆಹಿಡಿಯಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅನೇಕ ಮನೆಕಳ್ಳತನ, ರಾಬರಿ, ಚೈನ್ ಸ್ನಾಚಿಂಗ್, ಬೈಕ್ ಕಳ್ಳತನ ಸೇರಿದಂತೆ ಅನೇಕ ಕೇಸ್ ಬಗ್ಗೆ ವರದಿಯಾಗಿದ್ದವು. ದಾಖಲಾದ ದೂರಿನಾನ್ವಯ ಪೊಲೀಸರು ಖದೀಮರ ಬಂಧನಕ್ಕೆ ಬಲೆ ಬೀಸಿದ್ದರು.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *