Breaking News

60ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮ! ಅಬ್ಬಾ..ಈ ಘಟನೆ ಹೇಗೆ ನಡೆಯಿತು?

ಹುಬ್ಬಳ್ಳಿ: ನಗರದ ಮರಾಠಗಲ್ಲಿಯಲ್ಲಿರುವ ಮೆಟ್ರೋ ಮಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 60ಕ್ಕೂ ಅಧಿಕ ಅಂಗಡಿಗಳು ಹೊತ್ತಿ ಉರಿದಿರುವ ಘಟನೆ ನಡೆದಿದೆ. ಗುರುವಾರ ಮಧ್ಯರಾತ್ರಿ 12 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಕೆಲಸ ಮುಗಿಸಿ, ಮಾಲ್‌ಗೆ ಬೀಗ ಹಾಕಿ ಹೋಗಿದ್ದ ಸಂದರ್ಭದಲ್ಲಿ ನಾಲ್ಕನೇ ಫ್ಲೋರ್‌ನಲ್ಲಿರುವ ಲೈಫ್ ಸ್ಟೈಲ್ ಶಾಪ್‌ನಲ್ಲಿ ಮೊದಲಿಗೆ ಸಣ್ಣದಾಗಿ ಬೆಂಕಿ ಕಿಡಿ ಕಾಣಿಸಿಕೊಂಡಿದೆ. ನೋಡನೋಡುತ್ತಲೇ ಇಡೀ ಮಾಲ್‌ಗೆ ಬೆಂಕಿ ಆವರಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಆವರಿಸಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಹುಬ್ಬಳ್ಳಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಮಧ್ಯರಾತ್ರಿ 12 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಕೆಲಸ ಮುಗಿಸಿ, ಮಾಲ್‌ಗೆ ಬೀಗ ಹಾಕಿ ಹೋಗಿದ್ದ ಸಂದರ್ಭದಲ್ಲಿ ನಾಲ್ಕನೇ ಫ್ಲೋರ್‌ನಲ್ಲಿರುವ ಲೈಫ್ ಸ್ಟೈಲ್ ಶಾಪ್‌ನಲ್ಲಿ ಮೊದಲಿಗೆ ಸಣ್ಣದಾಗಿ ಬೆಂಕಿ ಕಿಡಿ ಕಾಣಿಸಿಕೊಂಡಿದೆ. ನೋಡನೋಡುತ್ತಲೇ ಇಡೀ ಮಾಲ್‌ಗೆ ಬೆಂಕಿ ಆವರಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.

Share News

About BigTv News

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *