Breaking News

ಎಣ್ಣೆ ಪಾರ್ಟಿ ಮಾಡಿ ಸ್ನೇಹಿತನಿಗೆ ಮುಹೂರ್ತ ಇಟ್ಟ ಹಂತಕರು..! ಕೆರೆಯಲ್ಲಿ ಕೊಲೆ, ರಸ್ತೆಯಲ್ಲಿ ಹೆಣ

ಬೆಂಗಳೂರು ಗ್ರಾಮಾಂತರ: ಎಣ್ಣೆ ಪಾರ್ಟಿ ನಡೆಸಿ ಸ್ನೇಹಿತನಿಗೆ ಮುಹೂರ್ತ ಇಟ್ಟು ಕ್ರೂರವಾಗಿ ಕೊಲೆ ಮಾಡಿ, ಬಳಿಕ ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಸಿದ್ದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಿದ್ದೇನಹಳ್ಳಿ ಗ್ರಾಮದ ಅಶೋಕ್ (35) ಕೊಲೆಯಾದ ದುರ್ದೈವಿ. ಆರೋಪಿಗಳು ಮೊದಲು ಕೆರೆಯ ಬಳಿ ಅಶೋಕ್‌ನನ್ನು ಕೊಲೆ ಮಾಡಿ, ನಂತರ ಮೃತದೇಹವನ್ನು ರಸ್ತೆ ಬದಿಗೆ ತಂದು ಹಾಕಿದ್ದಾರೆ ಎನ್ನಲಾಗಿದೆ. ಅಪರಾಧದ ಸಾಕ್ಷ್ಯ ನಾಶ ಮಾಡಲು ಹರಿದಿದ್ದ ರಕ್ತದ ಮೇಲೆ ಮಣ್ಣು ಹಾಕಿ, ಕಲ್ಲು ಇಟ್ಟು ಮುಚ್ಚಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಬಳಿಕ ಅಪಘಾತ ಸಂಭವಿಸಿದಂತೆ ತೋರಿಸಲು ಹಂತಕರು ಯತ್ನಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಅಶೋಕ್ ಹತ್ಯೆ ಪ್ರಕರಣದ ಹಿಂದೆ ಮಹಿಳೆಯ ಕೈವಾಡ ಇರಬಹುದು ಎಂಬ ಶಂಕೆಯೂ ವ್ಯಕ್ತವಾಗಿದ್ದು, ಪೊಲೀಸರು ಈ ದಿಕ್ಕಿನಲ್ಲಿ ತನಿಖೆ ಮುಂದುವರೆಸಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಸೂಲಿಬೆಲೆ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಲಭ್ಯವಿರುವ ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದು, ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಂಡಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *