Breaking News

ಬಲಮರಿಯಲ್ಲಿ ಮುಳುಗಿ ಪ್ರವಾಸಿ ಸಾವು

ಕೆ.ಆರ್.ಸಾಗರ : ಬೆಳಗೊಳ ಗ್ರಾಮದ ಬಳಿ ಇರುವ ಕಾವೇರಿ ಬಲಮುರಿ ತಾಣದಲ್ಲಿ ಈಜಲು ಹೋಗಿದ್ದ ಮಿಜೋರಾಂ ಮೂಲದ ಯುವಕ ಶುಕ್ರವಾರ ಮುಳುಗಿ ಮೃತನಾಗಿದ್ದಾನೆ. ಬೆಂಗಳೂರು ಕೊತ್ತನೂರಿನ ಕೈಲಾಸನಹಳ್ಳಿಯ ಕಾಲ್ವಿನ್ ಥಿಯೊಲಾಜಿಕಲ್ ಕಾಲೇಜ್‌ನಲ್ಲಿ ಬೈಬಲ್ ಅಧ್ಯಯನ ಮಾಡಲು ಬಂದಿದ್ದ ಮಿಜೋರಾಂನ ಚಂಪೈನ್ ಜಿಲ್ಲೆ ಜಿಯೋವಿಂಗ್ ಗ್ರಾಮದ ಜಾಮ್ ಲಿಯನ್ ತಾಂಗ್ (28) ಮೃತ. ಈತ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಪ್ರವಾಸದ ನಿಮಿತ್ತ ಸ್ನೇಹಿತರು ಮತ್ತು ಬೋಧಕರೊಂದಿಗೆ ಬಲಮುರಿಗೆ ಬಂದಿದ್ದ. ದೋಣಿ ವಿಹಾರ ಕೇಂದ್ರದ ಬಳಿ ಕಾವೇರಿ ನದಿಯಲ್ಲಿ ಸ್ನೇಹಿತರೊಂದಿಗೆ ಈಜುತ್ತಿದ್ದಾಗ ಮುಳಗಿದ. ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಹುಬ್ಬಳ್ಳಿ ಸಿದ್ಧಾರೂಢ ಮಠದ ಬಳಿ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣ ದಾಖಲು

ಹುಬ್ಬಳ್ಳಿ: ಸಿದ್ಧಾರೂಢ ಮಠದ ಪುಷ್ಕರಣಿ ಬಳಿಯ ಶೌಚಾಲಯದ ಹಿಂಭಾಗ 50 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಹಳೇಹುಬ್ಬಳ್ಳಿ …

Leave a Reply

Your email address will not be published. Required fields are marked *