Breaking News

ರೆಸಾರ್ಟ್ ನ ಗೂಗಲ್‌ ಬಿಸಿನೆಸ್‌ ಖಾತೆ ಹ್ಯಾಕ್‌ ಮಾಡಿ ವಂಚನೆ

ಮಂಗಳೂರು: ನಗರದ ರೆಸಾರ್ಟ್ ಒಂದರ ಗೂಗಲ್‌ ಬಿಸಿನೆಸ್‌ ಖಾತೆಯನ್ನು ಹ್ಯಾಕ್‌ ಮಾಡಿ ಪ್ರವಾಸಿಗರಿಗೆ ವಂಚನೆ ಮಾಡುತ್ತಿರುವ ಬಗ್ಗೆ ರೆಸಾರ್ಟ್ ಪ್ರಮುಖರು ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆಉಳ್ಳಾಲದಲ್ಲಿರುವ ಬೀಚ್‌ ರೆಸಾರ್ಟನ್ನು ಪ್ರವಾಸಿಗರು ಇಮೇಲ್‌, ಮೊಬೈಲ್‌ ನಂಬರ್‌ಗಳ ಮೂಲಕ ಸಂಪರ್ಕಿಸಿ ಮುಂಗಡವಾಗಿ ಕಾದಿರಿಸುತ್ತಿದ್ದರು. 2025ರ ನ. 10ರಂದು ರೆಸಾರ್ಟ್‌ನ ಅಧಿಕೃತ ಗೂಗಲ್‌ ಬಿಸಿನೆಸ್‌ನ ಎಕ್ಸೆಸ್‌ನ್ನು ಅಪರಿಚಿತ ವ್ಯಕ್ತಿಗಳು ಹ್ಯಾಕ್ ಮಾಡುವ ಮೂಲಕ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥರು ಹಲವಾರು ಬಾರಿ ಎಕ್ಸೆಸ್‌ ವಾಪಸ್‌ ಪಡೆಯುವಂತೆ ವಿನಂತಿ ಮಾಡಿದ್ದರೂ ಅದು ಸಾಧ್ಯವಾಗಿರಲಿಲ್ಲ. ಜ. 11ರಂದು ರೆಸಾರ್ಟ್‌ನ ಹೆಸರಿನಲ್ಲಿ ನಕಲಿಯಾಗಿ ಅಕೌಂಟ್‌ ತೆರೆದಿರುವುದು ಕಂಡು ಬಂದಿದೆ. ಇದು ಮಾತ್ರವಲ್ಲದೆ ಸಂಪರ್ಕಕ್ಕಾಗಿ ಮೊಬೈಲ್‌ ಹಾಗೂ ವಿಳಾಸ ನೀಡಿದ್ದಾರೆ. ಆ ಮೂಲಕ ರೆಸಾರ್ಟ್ ಬುಕ್‌ ಮಾಡುವ ಅಮಾಯಕ ಪ್ರವಾಸಿಗರು ಮತ್ತು ಸಾರ್ವಜನಿಕರನ್ನು ವಂಚಿಸುತ್ತಿರುವುದು ಕಂಡು ಬಂದಿತ್ತು. ಪ್ರವಾಸಿಗರು ಕರೆ ಮಾಡಿ ತಿಳಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತು ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಿದ್ದಾರೆ ಹಾಗೂ ಪೊಲೀಸರ ಮೊರೆಹೋಗಿದ್ದಾರೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *