Breaking News

ರಾಯಬಾಗ | ₹80 ಸಾವಿರ ಲಂಚ; ಎಸ್‌ಡಿಎ ಚಂದ್ರಶೇಖರ ಮುರಟಗಿ ಬಂಧನ

ಬೆಳಗಾವಿ ಜಿಲ್ಲೆ: ಪಟ್ಟಣದ ತಹಶೀಲ್ದಾರ್ ಕಚೇರಿಯ ಎಸ್‌ಡಿಎ ಚಂದ್ರಶೇಖರ ಮುರಟಗಿ ₹80 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ‘ಭೂ ದಾಖಲೆ ಸಂಬಂಧಿಸಿದ ಕೆಲಸಕ್ಕೆ ₹ 1 ಲಕ್ಷ ನೀಡುವಂತೆ ರೈತ ಶಿವಾನಂದ ದುಂಡಗಿ ಅವರಿಗೆ ಆರೋಪಿಯು ಬೇಡಿಕೆ ಇಟ್ಟಿದ್ದರು. ₹80 ಸಾವಿರ ಲಂಚ ಪಡೆಯುವಾಗ ಕಾರ್ಯಾಚರಣೆ ನಡೆಸಿ, ಬಂಧಿಸಿದೆವು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ದಾಳಿ ವೇಳೆ ಕಚೇರಿಯ ಕೆಲ ದಾಖಲೆಗಳನ್ನು ಪರಿಶೀಲಿಸಿದ್ದು, ಮ್ಯೂಟೇಷನ್, ಪಹಣಿ ತಿದ್ದುಪಡಿ ಸೇರಿ ಕಂದಾಯಕ್ಕೆ ಸಂಬಂಧಿಸಿದ ಕಡತಗಳನ್ನು ವಶಕ್ಕೆ ಪಡೆದುಕೊಂಡರು.

Share News

About BigTv News

Check Also

2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ RFO ಲೋಕಾಯುಕ್ತ ಬಲೆಗೆ

ತುಮಕೂರು: ಗುಬ್ಬಿ ವಲಯ ಅರಣ್ಯಾಧಿಕಾರಿ (RFO) ಕೆ.ಎಸ್. ಸತೀಶ್ ಚಂದ್ರ ಅವರು ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ …

Leave a Reply

Your email address will not be published. Required fields are marked *