ಬೆಂಗಳೂರು: ಯಲಹಂಕ ವಾಯುನೆಲೆ ಏರ್ ಶೋ ಗೇಟ್ ನಂ. 5ರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ150ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿಯಾಗಿವೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿದರು.ಒಟ್ಟು 50×6 ಕಾರು ಭಸ್ಮಏರ್ಶೋ ಗೇಟ್ ನಂ. 5 ಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಕಾರು ಮಾಲೀಕರ ಜೊತೆ ಮಾತುಕತೆ ನಡೆಸಿದರು. ಕಾರಿನಲ್ಲಿ ಇಟ್ಟಿದ್ದ ದಾಖಲೆಗಳು, ಮನೆ ಕೀ, ವ್ಯಾಲೆಟ್ ಸೇರಿದಂತೆ ಬೆಲೆ ಬಾಳುವ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಭಸ್ಮಗೊಂಡಿರುವ ಬಗ್ಗೆ ಕಾರು ಮಾಲೀಕರು ಅಳಲು ತೋಡಿಕೊಂಡರು. ಪಾರ್ಕಿಂಗ್ನಲ್ಲಿ ಒಂದು ಲೈನ್ನಲ್ಲಿ 50ರಂತೆ ಆರು ಲೈನ್ನಲ್ಲಿರುವ ಕಾರುಗಳು ಬಹುತೇಕ ಭಸ್ಮವಾಗಿವೆ ಎನ್ನಲಾಗಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





