Breaking News

ಡ್ರಗ್ಸ್‌ ಶಂಕೆ: ಮೈಸೂರು ಕೆಮಿಕಲ್‌ ಫ್ಯಾಕ್ಟ್ರಿ ಮೇಲೆ ದಿಲ್ಲಿ ಪೊಲೀಸ್‌ ದಾಳಿ

ಮೈಸೂರು: ಕೆಮಿಕಲ್ ಫ್ಯಾಕ್ಟರಿಯಲ್ಲಿ ಎಂಡಿಎಂಎ ಮಾದಕ ವಸ್ತು ತಯಾರಿಕೆ ಮಾಡುತ್ತಿರುವ ಶಂಕೆ ಮೇರೆಗೆ ಹೊಸದಿಲ್ಲಿ ಪೊಲೀಸರು, ಬುಧವಾರ ಬೆಳಗ್ಗೆ ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆಹೊಸ ದಿಲ್ಲಿಯ ನಾರ್ಕೊಟಿಕ್ ಕಂಟ್ರೋಲ್ ಬ್ಯುರೋದ (ಎಸ್‌ಸಿಬಿ) ಎಸ್‌ಐ ಸೇರಿ ಪೊಲೀಸರ ತಂಡ, ಎಂಡಿಎಂಎ ತಯಾರು ಮಾಡುತ್ತಿರುವ ಶಂಕೆಯ ಮೇರೆಗೆ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರಿಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಆದರೆ, ಕಾರ್ಯಾಚರಣೆ ವೇಳೆ ಯಾವುದೇ ಬಗೆಯ ತಯಾರಿಕಾ ವಸ್ತುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಕೆಮಿಕಲ್ ಫ್ಯಾಕ್ಟರಿಯ ಮಾಲೀಕರ ಸಂಬಂಧಿಯೊಬ್ಬ ಗುಜರಾತ್‌ನಲ್ಲಿನ ಡ್ರಗ್ಸ್ ತಯಾರಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದು ಇದರ ಆಧಾರದ ಮೇಲೆ ಮೈಸೂರಿನಲ್ಲಿರುವ ಸಂಬಂಧಿ ಕೂಡ ಕೆಮಿಕಲ್ ಫ್ಯಾಕ್ಟರಿ ನಡೆಸುತ್ತಿದ್ದು ಇಲ್ಲಿಯೂ ಮಾದಕ ವಸ್ತು ತಯಾರಿಸಲಾಗುತ್ತಿದೆಯೇ ಎಂಬ ಅನುಮಾನದ ಮೇರೆಗೆ ಶೋಧ ಕಾರ್ಯ ನಡೆಸಲಾಗಿದೆ. ಡ್ರಗ್ಸ್ ಗೆ ಸಂಬಂಧಿಸಿದ ಯಾವುದೇ ವಸ್ತು ಸಿಕ್ಕಿಲ್ಲ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *