Breaking News

ಅರ್ಜುನ್​ ಸರ್ಜಾಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಾಧ್ಯತೆ

ಬೆಂಗಳೂರು: ನಟಿ ಶ್ರುತಿ ಹರಿಹರನ್ #MeToo ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್ ಸರ್ಜಾಗೆ ಬಂಧನ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅರ್ಜುನ್ ಸರ್ಜಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.ನಗರದ ಮೇಯೋ ಹಾಲ್​ನ 22 ಸಿಸಿಹೆಚ್ ಹಾಲ್​ನಲ್ಲಿ ನ್ಯಾಯಧೀಶ ಶ್ರೀ ಬಿ.ನಾರಾಯಣಪ್ಪ ಅವರಿಂದ ಇಂದು ಮದ್ಯಾಹ್ನ 12:30ಕ್ಕೆ ವಿಚಾರಣೆ ನಡೆಯಲಿದೆ.ಸದ್ಯ ಶ್ರುತಿ ಹರಿಹರನ್​ ದೂರಿನಲ್ಲಿ ಉಲ್ಲೇಖ ಮಾಡಿದ್ದ ಸಾಕ್ಷಿಗಳಾದ ಬೋರೇಗೌಡ ಮತ್ತು ಕಿರಣ್ರನ್ನು ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಕಬ್ಬನ್ ಪಾರ್ಕ್ ಪೊಲೀಸರು ಸಿಆರ್​ಪಿಸಿ 164 ಸೆಕ್ಷನ್​ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಖುದ್ದು ಶ್ರುತಿ ಹರಿಹರನ್ ಅವರೇ ಹಾಜರಾಗಿ ನಡೆದ ಪ್ರಕರಣ ಬಗ್ಗೆ ವಿವರಿಸಬೇಕು. ಒಂದು ವೇಳೆ ಸಿಆರ್​ಪಿಸಿ 164 ಸೆಕ್ಷನ್​ ಅಡಿಯಲ್ಲಿ ಶ್ರುತಿ ಹರಿಹರನ್ ಮ್ಯಾಜಿಸ್ಟ್ರೇಟ್​ ಮುಂದೆ ಹಾಜರಾಗಿ ಸಂಪೂರ್ಣ ಪ್ರಕರಣ ಬಿಚ್ಚಿಟ್ಟಿಲ್ಲಿ, ತನಿಖೆ ವೇಳೆ ಅಥವಾ ತನಿಖೆಯ ನಂತರ ಯಾವುದೇ ಕ್ಷಣಗಳಲ್ಲಿ ತಮ್ಮ ಹೇಳಿಕೆ ಬದಲಾಯಿಸುವಂತಿಲ್ಲ. ಹೀಗಾಗಿ ಹೇಳಿಕೆ ಬದಲು ಮಾಡದಂತೆ ಪೊಲೀಸರು ಸಿಆರ್​ಪಿಸಿ 164 ಸೆಕ್ಷನ್​ ಹಾಕಿ ಶ್ರುತಿ ಹರಿಹರನ್​ರನ್ನ ಹಾಗೂ ಪ್ರಕರಣದ ಇನ್ನಿಬ್ಬರು ಸಾಕ್ಷಿ ಬೋರೇಗೌಡ ಹಾಗೂ ಕಿರಣ್​ರನ್ನ ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಬ್ಬರೂ ಸಾಕ್ಷಿಗಳ ಸ್ವ-ಇಚ್ಛಾ ಹೇಳಿಕೆಯನ್ನು ಪೊಲೀಸರು ಪಡೆಯಲಿದ್ದಾರೆ. ಸಾಕ್ಷಿಗಳ ಹೇಳಿಕೆ ಮೇಲೆ ಅರ್ಜುನ್ ಸರ್ಜಾರ ಬಂಧನವಾಗುವ ಸಾಧ್ಯತೆ ಇದೆ.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *