ಮುಂಬೈನ ಗಿರಗಾಂವ್ ಪ್ರದೇಶದಲ್ಲಿ ಶಾಲಾ ಬಸ್‌ವೊಂದು ಹರಿದ ಪರಿಣಾಮ ಒಂದು ವರ್ಷದ ಮಗು ಮೃತಪಟ್ಟಿದ್ದು, ಅಜ್ಜಿ ತೀವ್ರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಭೀಕರ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಂದ್ರಕಲಾ ಶಿವರಾಂ ವ್ಯಾಸ್ ಎಂಬುವವರು ಅವರು ತಮ್ಮ ಮೊಮ್ಮಗಳನ್ನು ಶಾಲಾ ಬಸ್‌ನಿಂದ ಕರೆದೊಯ್ಯಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅವರು ತಮ್ಮ ಒಂದು ವರ್ಷದ ಮೊಮ್ಮಗ ಅವೀರ್ ವ್ಯಾಸ್‌ನನ್ನು ಕೈಯಲ್ಲಿ ಎತ್ತಿಕೊಂಡಿದ್ದರು. ಮೊಮ್ಮಗಳು ಬಸ್‌ನಿಂದ ಇಳಿದ ನಂತರ, ಚಂದ್ರಕಲಾ ಅವರು ವಾಹನದ ಮುಂಭಾಗದಿಂದ ರಸ್ತೆ ದಾಟಲು ಪ್ರಾರಂಭಿಸಿದರು. ಅವರು ರಸ್ತೆ ದಾಟುತ್ತಿದ್ದಾಗ, ಬಸ್ ಚಾಲಕನು ಅವರನ್ನು ಗಮನಿಸದೇ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದಾನೆ. ಬಸ್ ಚಂದ್ರಕಲಾ ಮತ್ತು ಮಗುವಿಗೆ ಡಿಕ್ಕಿ ಹೊಡೆದು ಅವರ ಮೇಲೆ ಹರಿದಿದೆ. ಇದರಿಂದ ಇಬ್ಬರಿಗೂ ಗಂಭೀರ ಗಾಯಗಳಾಗಿವೆ.ತಕ್ಷಣವೇ ಅಲ್ಲಿದ್ದ ಜನರು ಸಹಾಯಕ್ಕೆ ಧಾವಿಸಿ, ಗಾಯಾಳುಗಳನ್ನು ಗಿರಗಾಂವ್‌ನ ರಿಲಯನ್ಸ್ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

