Breaking News

ಬಳ್ಳಾರಿ: ವಿಮೆ ಹೆಸರಲ್ಲಿ 11 ಲಕ್ಷ ವಂಚನೆ

ನಗರದ ಉದ್ದಿಮೆದಾರರೊಬ್ಬರಿಗೆ ವಿಮೆ ಹೆಸರಿನಲ್ಲಿ ₹11.41 ಲಕ್ಷ ವಂಚನೆ ಮಾಡಲಾಗಿದೆ. ಈ ಕುರಿತು ಬಳ್ಳಾರಿಯ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರುದಾರ ವ್ಯಕ್ತಿಗೆ ಈಚೆಗೆ ಕರೆ ಮಾಡಿದ್ದ ವಂಚಕರು, ನೀವು ಹೊಂದಿರುವ ವಿಮೆಗೆ ಈಗಲೇ ಹಣ ಪಾವತಿಸಿದರೆ ಶೇ 25ರಷ್ಟು ರಿಯಾಯಿತಿ ದೊರೆಯುವುದಾಗಿ ತಿಳಿಸಿದ್ದರು. ಅದನ್ನು ನಂಬಿದ ವ್ಯಕ್ತಿ ಹಣ ಪಾವತಿಗೆ ಮುಂದಾಗಿದ್ದರು. ಆಗ ಸಂಪರ್ಕ ಮಾಡಿದ್ದ ಅದೇ ಜಾಲದ ಮತ್ತೊಬ್ಬ ವಂಚಕ, ನಿಮ್ಮ 5 ವಿಮೆ ಪಾಲಿಸಿಗಳಿಂದ ₹8,90,874 ಹಣ ಏಜೆಂಟರಿಗೆ ಹೋಗುತ್ತಿದ್ದು, ಅದನ್ನು ಹಿಂದಕ್ಕೆ ಪಡೆಯಬೇಕಿದ್ದರೆ ₹60 ಸಾವಿರ ಹಣ ಪಾವತಿ ಮಾಡಿ ಎಂದು ತಿಳಿಸಿದ್ದರು. ಇದನ್ನು ನಂಬಿದ ದೂರುದಾರ ವ್ಯಕ್ತಿ ಹಂತ ಹಂತವಾಗಿ ₹11,41,011 ಹಣವನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಿದ್ದಾರೆ. ಕೊನೆಗೆ ಇದು ವಂಚನೆ ಎಂದು ಅರಿತು ಸಿಇಎನ್‌ ಠಾಣೆಗೆ ದೂರು ನೀಡಿದ್ದಾರೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *