ಕಲಬುರಗಿ: ಪಿಎಸ್ ಐ ಪರೀಕ್ಷಾ ಹಗರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಮೈಸೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇಲ್ಲಿನ ಕಲಬುರಗಿ ಕೇಂದ್ರ ಕಾರಗೃಹದಿಂದ ಮೈಸೂರಿಗೆ ಸ್ಥಳಾಂತರಗೈಯಲಾಗಿದೆ.ಕಲಬುರಗಿ ಜೈಲಿನಲ್ಲಿ ಕಿರಿಕ್ ಮಾಡ್ತಿದ್ದ ಹಿನ್ನಲೆ ಮೈಸೂರಿಗೆ ಕಾರಾಗೃಹ ಇಲಾಖೆ ಸ್ಥಳಾಂತರ ಮಾಡಿದೆ. ಕಳೆದ ತಿಂಗಳು ಜೈಲಿನಲ್ಲಿ ಜೂಜಾಟ ಹಾಗೂ ಎಣ್ಣೆ ಹೊಡೆಯುವ ವಿಡಿಯೋ ವೈರಲ್ ಆಗಿತ್ತು.ಅದಕ್ಕೆಲ್ಲಾ ಮಾಸ್ಟರ್ ಮೈಂಡ್ ಆರ್.ಡಿ.ಪಾಟೀಲ್ ನೇ ಆಗಿದ್ದ. ಅಲ್ಲದೇ ಕಲಬುರಗಿ ಜೈಲು ಮುಖ್ಯ ಅಧೀಕ್ಷಕಿಯ ವಿರುದ್ದ ಲಂಚದ ಆರೋಪ ಮಾಡಿದ್ದ. ಬಳಿಕ ಪೆನ್ ಡ್ರೈವ್ ಮೂಲಕ ವಿಡಿಯೋ ವೈರಲ್ ಮಾಡಿಸಿದ್ದ ಎನ್ನಲಾಗಿರುವ ಹಿನ್ನೆಲೆಯಲ್ಲಿ ಸ್ಥಳಾಂತರ ಮಾಡಲಾಗಿದೆ. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಐಷಾರಾಮಿ ಜೀವನ ಕುರಿತಾಗಿ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಸಿದ್ದರಲ್ಲದೇ ತನಿಖೆಗೂ ಸೂಚಿಸಿದ್ದರು. ತನಿಖೆ ಆಧಾರದ ಮೇಲೆ ಕಾರಾಗೃಹದಿಂದ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

