Breaking News

ಸಕ್ರೆಬೈಲು ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಓರ್ವ ಮೃತ್ಯು, ಮತ್ತೊರ್ವನ ಸ್ಥಿತಿ ಗಂಭೀರ

ತೀರ್ಥಹಳ್ಳಿ: ಕಾರು ಬಸ್ಸು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಮತ್ತೊರ್ವ ಗಂಭೀರ ಗಾಯಗೊಂಡಿರುವ ಘಟನೆ ಸಕ್ರೆಬೈಲು ಬಳಿ ನಡೆದಿದೆ. ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆ ಬರುತ್ತಿದ್ದ ಆಲ್ಟೊ ಕಾರ್ ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮತ್ತೊರ್ವನ ಸ್ಥಿತಿ ಗಂಭೀರವಾಗಿದ್ದು ಆತನನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಸ್ಸಿನ ಮುಂಭಾಗ ಹಾಗೂ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಕಾರು ಬಲ ಭಾಗಕ್ಕೆ ಹೋಗಿ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Share News

About BigTv News

Check Also

ಕುಷ್ಟಗಿಯಲ್ಲಿ ಘೋರ ದುರಂತ: ಮೂವರು ಮಕ್ಕಳಿಗೆ ವಿಷ ಕುಡಿಸಿ ತಂದೆಯೂ ಆತ್ಮಹತ್ಯೆಗೆ ಯತ್ನ!

ಕುಷ್ಟಗಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಮದ್ಯವ್ಯಸನಿ ತಂದೆಯೊಬ್ಬ ತನ್ನ 10, 8 ಮತ್ತು 5 ವರ್ಷದ ಮೂವರು ಮಕ್ಕಳಿಗೆ ವಿಷ …

Leave a Reply

Your email address will not be published. Required fields are marked *