ನಗರದ ವಿವಿಧೆಡೆ 20ಕ್ಕೂ ಅಧಿಕ ಬೈಕ್ ಕದ್ದ ಆರೋಪದಡಿ ಒಬ್ಬನನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಹುಕ್ಕೇರಿ ತಾಲ್ಲೂಕಿನ ಬೆನಕನಹೊಳಿಯ ಸಂಜು ಮೇಖಳಿ ಬಂಧಿತ. ಈಚೆಗೆ ಕೋಟೆ ರಸ್ತೆಯಲ್ಲಿ ಮತ್ತು ಕಪಿಲೇಶ್ವರ ದೇವಸ್ಥಾನ ಬಳಿ ಈತ ವಾಹನಗಳ ಕಳ್ಳತನ ಮಾಡಿದ್ದ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ₹2,78,000 ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆದಿದ್ದು, ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

