ಪತ್ನಿಯ ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವಮಾನ ಮಾಡುವ ಉದ್ದೇಶದಿಂದ ಪತಿಯೇ ಪತ್ನಿಯ ತಲೆ ಬೋಳಿಸಿದ್ದಾರೆ. ತೊದಲಬಾಗಿಯ ಉಮೇಶ ಎನ್ನುವ ಆರೋಪಿ ಎಲೆಕ್ಟ್ರಿಕ್ ಟ್ರಿಮ್ಮರ್‌ನಿಂದ ತಲೆ ಬೋಳಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತ್ನಿಯ ತವರು ಮನೆಯವರು ಬುದ್ಧಿ ಹೇಳಿದ್ದರು. ಆ ನಂತರವೂ ಪತಿಯ ನಡವಳಿಕೆಯಲ್ಲಿ ಬದಲಾವಣೆಯಾಗಿರಲಿಲ್ಲ. ಜ.31ರಂದು ರಾತ್ರಿ ತಲೆ ಬೋಳಿಸಿ, ಮನೆಯಲ್ಲಿ ಕೂಡಿ ಹಾಕಲಾಗಿತ್ತು. ಆರೋಪಿ ಉಮೇಶ್ ಅವರನ್ನು ಬಂಧಿಸಲಾಗಿದೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

