Breaking News

ನವಲೂರು ಗ್ರಾಮದ ಮೇಲ್ವೇತುವೆ ಕಾಮಗಾರಿ ಪುನರಾರಂಭ


ಹುಬ್ಬಳ್ಳಿ : ಅವಳಿ ನಗರದ ರಸ್ತೆ ಮಧ್ಯೆ ಇರುವ ನವಲೂರು ಗ್ರಾಮದ ಮೇಲ್ವೇತುವೆ ಕಾಮಗಾರಿ ಇದೀಗ ಪುನರಾರಂಭಗೊಂಡಿದೆ .

ನವಲೂರು ಗ್ರಾಮದ ಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಈ ಕಾಮಗಾರಿ ನನೆಗುದಿಗೆ ಬಿದ್ದಿತ್ತು . ಗ್ರಾಮಸ್ಥರಿಗೆ ಈ ಕಾಮಗಾರಿಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿದೆ ಎಂದು ನವಲೂರು ಗ್ರಾಮಸ್ಥರು ಕಾಮಗಾರಿ ನಡೆಸದಂತೆ ಪ್ರತಿಭಟನೆ ನಡೆಸಿದ್ದರು . ಅಲ್ಲದೆ , ನ್ಯಾಯಾಲಯದಲ್ಲಿ ಪ್ರಕರಣವನ್ನು ಸಹ ದಾಖಲಿಸಿದ್ದರು . ಇದೀಗ ಹುಬ್ಬಳ್ಳಿ – ಧಾರವಾಡ ಬಿಆರ್‌ಟಿಎಸ್ ಸಂಸ್ಥೆ , ಜನರಿಗೆ ಅನುಕೂಲವಾಗುವಂತೆ ಕಾಮಗಾರಿಯನ್ನು ಕೈಗೊಳ್ಳಲು ನಿರ್ಧಾರ ತೆಗೆದುಕೊಂಡು ಜನರಿಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಪುನರಾರಂಭಗೊಂಡಿದೆ .

Share News

About admin

Check Also

ವಿಜಯಪುರದಲ್ಲಿ ಹಾಡಹಗಲೇ ಫೈರಿಂಗ್ : ನಡು ರಸ್ತೆಯಲ್ಲೇ ಗುಂಡಿನ ದಾಳಿ ನಡೆಸಿ, ವ್ಯಕ್ತಿಯ ಹತ್ಯೆ!

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಬಳಿ ಯುವಕನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಟಕ್ಕೆ ಗ್ರಾಮದ ಯಾಸೀನ್ ಜುಬೇರ್ (ಮೃತ) ಸ್ಕೂಟಿಯಲ್ಲಿ …

Leave a Reply

Your email address will not be published. Required fields are marked *