Breaking News

ಆನ್​ಲೈನ್ ಗೇಮ್ ಗೀಳು; ಪೋಷಕರು ಬೈದಿದ್ದಕ್ಕೆ 9ನೇ ಮಹಡಿಯಿಂದ ಬಿದ್ದು ಮೂವರು ಸಹೋದರಿಯರು ಆತ್ಮಹತ್ಯೆ

ಲಖನೌ: ಆನ್​ಲೈನ್​ ಗೇಮ್​ ಗೀಳಿನ ಸಲುವಾಗಿ ಪೋಷಕರು ಬೈದಿದ್ದಕ್ಕೆ ಮೂವರು ಅಪ್ರಾಪ್ತ 12, 14, 16 ವರ್ಷದ ಮೂವರು ಸಹೋದರಿಯರು ಅಪಾರ್ಟ್​​​ಮೆಂಟ್​ನ 9ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಇಂದು(ಫೆ.04) ಮಧ್ಯರಾತ್ರಿ ನಡೆದಿದ್ದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಗಾಜಿಯಾಬಾದ್‌ನ ಭಾರತ್ ಸಿಟಿಯಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕಿಯರನ್ನು ಪಖಿ(12), ಪ್ರಾಚಿ(14) ಹಾಗೂ ವಿಶಿಕಾ(16) ಎಂದು ಗುರುತಿಸಲಾಗಿದೆ. ಮೂವರು ಒಟ್ಟಿಗೆ ಸ್ನಾನ, ಊಟ, ಶಾಲೆಗೆ ಹೋಗುವುದು ಹಾಗೂ ಮಲಗುವುದು ಸೇರಿದಂತೆ ದೈನಂದಿನ ಚಟುವಟಿಕೆಗಳನ್ನು ಒಟ್ಟಿಗೆ ಮಾಡ್ತಿದ್ದರು ಎನ್ನಲಾಗಿದೆ. ಕೋವಿಡ್-19 ಸಮಯದಿಂದ ಮೂವರು ಆನ್​ಲೈನ್​ ಗೇಮ್​ಗಳಿಗೆ ವ್ಯಸನಿಯಾಗಿದ್ದರು ಎನ್ನಲಾಗದೆ. ಮತ್ತು ಮೂವರು ಆನ್​ಲೈನ್ ಟಾಸ್ಕ್​ ಆಧಾರಿತ ಕೋರಿಯನ್ ಲವ್ ಗೇಮ್ ಆಡುತ್ತಿದ್ದರು, ಅದರ ಗೀಳಿನಿಂದ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *