ಹುಬ್ಬಳ್ಳಿ: ನವಶ್ರೀ ಕಲಾ ಚೇತನಾ ಸಂಸ್ಥೆ ವತಿಯಿಂದ ಮಂಗಳಮುಖಿಯ ‘ಮೂರನೆಯ ಮುಖ’ ಎಂಬ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಗಷ್ಟೇ 02 ರಂದು ಸಂಜೆ 5 ಗಂಟೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರು ಸಂಗೀತಾ ದೇವದಾಸ್ ಹೇಳಿದರು.ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಮಾಸ ನಿಮಿತ್ತವಾಗಿ ದೇಶಪಾಂಡೆನಗರದ ಕಾಮಾಕ್ಷಿ ದೇವಸ್ಥಾನದಿಂದ ಸವಾಯಿ ಗಂಧರ್ವ ಕಲಾಭವನದವರೆಗೆ ಮೆರವಣಿಗೆ ಇರಲಿದ್ದು, ನಂತರ ಎಲ್ಲಮ್ಮ ಉತ್ಸವ ಎಂಬ ಕಾರ್ಯಕ್ರಮದ ಮೂಲಕ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದ ಉದ್ದೇಶ ಸಮಾಜ ಮತ್ತು ಸಮಾಜಕ್ಕೆ ಒಳಪಟ್ಟ ಒಂದು ಭಾಗ ಎಂದು ತಿಳಿಸುವುದು, ಶೈಕ್ಷಣಿಕ ದೃಷ್ಟಿಕೋನ ಮತ್ತು ಯೋಜನೆಗಳನ್ನು ತಿಳಿಸುವುದು, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ನಡುವೆ ಸಂಪರ್ಕ ನಿರ್ಮಿಸುವುದು, ಮಂಗಳ ಮುಖಿಯರಲ್ಲಿ ಕಷ್ಟದಿಂದ ಗಳಿಸಿರುವ ಶಿಕ್ಷಣ ಉದ್ಯೋಗಗಳನ್ನು ಇತರೆ ಮಂಗಳ ಮುಖಿಯರಿಗೆ ತಿಳಿಯಪಡಿಸುವುದರಿಂದ ಮತ್ತು ಮಾದರಿಯಾಗಲು ಪ್ರೇರಣೆ ಕೊಡುವುದು ಸೇರಿದಂತೆ ಕಾರ್ಯಕ್ರಮದ ಉದ್ದೇಶಗಳಾಗಿವೆ ಎಂದರು.ಮೂರನೇ ಮುಖ ಎಂಬ ಪ್ರಶಸ್ತಿಯನ್ನು ಸಾಧನೆಗೈದ ಮಂಗಳಮುಖಿ ಸಾಧಕರಿಗೆ ನೀಡಿ, ಸನ್ಮಾನ ಮಾಡಲಾಗುವುದು ಎಂದು ಅವರು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





