Breaking News

ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ: ವರ, ಪೋಷಕರು ಸೇರಿ 6 ಜನರ ವಿರುದ್ಧ ಎಫ್ ಐಆರ್ ದಾಖಲು

ಬೀದರ್: ಅಪ್ರಾಪ್ತ ಬಾಲಕಿಯೊಂದಿಗೆ ಮದುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರ ಹಾಗೂ ಆತನ ಪೋಷಕರು ಸೇರಿದಂತೆ 6 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಘಟನೆ ಬೀದರ್ ನ ಜನವಾಡದಲ್ಲಿ ನಡೆದಿದೆ. ಜನವಾಡದ ತಾಲೂಕಿನ ಗ್ರಾಮವೊಂದರ ಚರ್ಚ್ ನಲ್ಲಿ 17 ವರ್ಷದ 8 ತಿಂಗಳ ಬಾಲಕಿಯೊಂದಿಗೆ 24 ವರ್ಷದ ಯುವಕ ಮದುವೆಯಾಗಿದ್ದ.ಖಚಿತ ಮಾಹಿತಿ ಮೇರೆಗೆ ಗ್ರಾಮ ಪಂಚಾಯತ್ ಪಿಡಿ, ಬಾಲಕಿ ಶಾಲಾ ದಾಖಲೆ, ಆಧಾರ್ ಕಾರ್ಡ್ ಪರಿಶೀಲಿಸಿದಾಗ ಅಪ್ರಾಪ್ತೆ ಎಂಬುದು ಗೊತ್ತಾಗಿದೆ. ವಿವಾಹವಾದ ಯುವಕ, ಆತನ ಪೋಷಕರು ಹಾಗೂ ಮದುವೆಗೆ ಸಹಕರಿಸಿದ ಆರು ಜನರ ವಿರುದ್ಧ ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವರದಿ ಸಲ್ಲಿಸಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *