1.25 ಲಕ್ಷ ಲಂಚ ಸ್ವೀಕರಿಸುವಾಗ ತಹಶಿಲ್ದಾರ್ ಎಸಿಬಿ ಬಲೆಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದಿದೆ.ಪುತ್ತೂರು ತಹಶಿಲ್ದಾರ್ ಡಾ.ಪ್ರದೀಪ್ ಎಸಿಬಿ ಬಲೆಗೆ ಬಿದಿದ್ದು, ಊಟದ ಬಿಲ್ ಬಿಡುಗಡೆ ಮಾಡಲು ಲಂಚ ಕೇಳಿದ್ದರು. ಲೋಕಸಭಾ ಚುನಾವಣೆ ವೇಳೆ ಊಟೋಪಚಾರದ 9.37 ಲಕ್ಷ ಹಣ ಬಿಡುಗಡೆ ಮಾಡಬೇಕಿತ್ತು. ಆದ್ರೇ ಈ ಹಣ ಬಿಡುಗಡೆ ಮಾಡುವುದಕ್ಕೆ 1.25 ಲಕ್ಷ ಹಣ ಕೇಳಿ, ಇಂದು ಆ ಹಣವನ್ನು ಪಡೆಯುವಾಗ ಸಿಕ್ಕಿ ಬಿದಿದ್ದಾರೆ. ಎಸಿಬಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ತಹಶಿಲ್ದಾರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





