Breaking News

ವೃದ್ಧನನ್ನು ಥಳಿಸಿಕೊಂದ ಆರೋಪ:ಟಿಎಂಸಿ ಕೌನ್ಸಿಲರ್‌ ಪಕ್ಷದಿಂದ ಅಮಾನತು

ಕೋಲ್ಕತಾ: 80 ವರ್ಷದ ವೃದ್ಧನ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣವಾದ ಆರೋಪದ ಮೇಲೆ ಬಂಧಿಸಲ್ಪಟ್ಟ ಉತ್ತರ ಬ್ಯಾರಕ್‌ಪೋರ್ ಪುರಸಭೆಯ ಕೌನ್ಸಿಲರ್ ರವೀಂದ್ರ ನಾಥ್ ಭಟ್ಟಾಚಾರ್ಯ ಅವರನ್ನು ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಸೋಮವಾರ ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿದೆ. ಟಿಎಂಸಿ ಸಂಸದ ಪಾರ್ಥ ಭೌಮಿಕ್, ಪಕ್ಷವು ಈ ವಿಷಯದ ಬಗ್ಗೆ ಶೂನ್ಯ ಸಹಿಷ್ಣುತೆ ನಿಲುವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದು, ಕೌನ್ಸಿಲರನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ವಾರ್ಡ್ ಸಂಖ್ಯೆ 23 ರಲ್ಲಿ ತಮ್ಮ ಮನೆಯ ಮುಂದೆ ಅಕ್ರಮ ನಿರ್ಮಾಣವನ್ನು ವಿರೋಧಿಸಿದ್ದಕ್ಕಾಗಿ ತುಳಸಿ ಅಧಿಕಾರಿ ಎಂಬ ವೃದ್ಧನನ್ನು ಭಟ್ಟಾಚಾರ್ಯ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಶನಿವಾರ ತುಳಸಿ ಅಧಿಕಾರಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಅವರನ್ನು ಬ್ಯಾರಕ್‌ಪೋರ್ ಕಂಟೋನ್ಮೆಂಟ್‌ನ ಜಗದೀಶ್ ಚಂದ್ರ ಬೋಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *